ಉಜಿರೆ ಬಾಲಕನ ಅಪಹರಣ ಪ್ರಕರಣ: ಬಿಡುಗಡೆಗೆ 17 ಕೋಟಿ ರೂ.ಗೆ ಬೇಡಿಕೆಯಿಟ್ಟ ಅಪಹರಣಕಾರರು!

Ujire
Published on

ಮಂಗಳೂರು: ಉಜಿರೆಯಲ್ಲಿ 8 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕಾರರು ಬಾಲಕನ ಬಿಡುಗಡೆಗೆ ಬರೋಬ್ಬರಿ 17 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆಂದು ತಿಳಿದುಬಂದಿದೆ.

ಮಾಜಿ ಸೈನಿಕ ಶಿವನ್​ ಪುತ್ರ ಬಿಜೋಯ್ ಎಂಬುವರ ಮಗ ಅನುಭವ್​ನನ್ನು ಅಪಹರಿಸಲಾಗಿದೆ. ಮಾಜಿ ಸೈನಿಕ ಶಿವನ್ ಓರ್ವ ದೊಡ್ಡ ಉದ್ಯಮಿ. ಹಣಕಾಸಿನ ವ್ಯವಹಾರದಲ್ಲಿ ವ್ಯಾಜ್ಯ ಇದ್ದವರಿಂದ ಕಿಡ್ನಾಪ್ ಮಾಡಿರುವ ಸಾಧ್ಯತೆ ಇದ್ದು, ಅಪಹರಣಕಾರರಿಗಾಗಿ ಪೊಲೀಸರು ಸದ್ಯ ಎಲ್ಲಾ ಕಡೆ ಕಾರ್ಯಾಚರಣೆ ಮಾಡುತ್ತಿದ್ದಾರೆ.

ನಿನ್ನೆ ಸಂಜೆ 6.30ರ ಸುಮಾರಿಗೆ ಅನುಭವ್​ನನ್ನು ಹಳದಿ ಪ್ಲೇಟ್ ನಂಬರ್​ನ ಇಂಡಿಕಾ ಕಾರ್​ನಲ್ಲಿ ಅಪಹರಿಸಲಾಗಿದೆ. ಬಿಜೋಯ್ ಹಾರ್ಡ್​ವೇರ್ ವ್ಯವಹಾರಸ್ಥರಾಗಿದ್ದಾರೆ. ನಿನ್ನೆ ಬಿಜೋಯ್ ಪತ್ನಿ ಸರಿಯಾ ಬಿಜೋಯ್ ಗೆ ಕರೆ ಮಾಡಿ 17 ಕೋಟಿ ರೂಪಾಯಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ.

ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಕಿಡ್ನಾಪರ್ಸ್ ಇರುವ ಶಂಕೆ ವ್ಯಕ್ತವಾಗಿದ್ದು, ಎರಡು ಪೊಲೀಸ್ ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಿಂದ ಹೊರ ಹೋಗುವ ದಾರಿಗಳಲ್ಲಿ ನಾಕಾಬಂದಿ ಇರಿಸಲಾಗಿದೆ. ಚಾರ್ಮಾಡಿ, ಕೊಟ್ಟಿಗೆಹಾರ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net