More

    ಅಲ್ಲಿದೆ ನಮ್ಮನೆ: ಪರಭಾಷೆಗಳಲ್ಲಿ ಬಿಜಿಯಾದ ಕನ್ನಡತಿಯರು…

    ಬೆಂಗಳೂರು: ಚಿತ್ರರಂಗದಲ್ಲಿ ಅತ್ಯಂತ ಮಾಮೂಲಿ ವಿಷಯವೆಂದರೆ ಅದು ಗಿವ್ ಆಂಡ್ ಟೇಕ್ ಪಾಲಿಸಿ. ಈ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಆ ಭಾಷೆಗೆ ಹೋಗುವುದು, ಅಲ್ಲಿನವರು ಇಲ್ಲಿಗೆ ಬರುವುದು ಹೊಸದೇನಲ್ಲ. ಆದರೆ, ನಾಯಕಿಯರ ವಿಚಾರದಲ್ಲಿ ಗೀವ್​ಗಿಂಥ ಟೇಕ್ ಹೆಚ್ಚಿತ್ತು. ಏಕೆಂದರೆ, ಇಲ್ಲಿಯವರೆಗೂ ಕನ್ನಡದಿಂದ ಬೇರೆ ಭಾಷೆಗಳಿಗೆ ಹೋಗಿ ದೊಡ್ಡ ಹೆಸರು ಮಾಡಿದವರಿಗಿಂತ, ಅಲ್ಲಿಂದ ಇಲ್ಲಿಗೆ ಬಂದು ಮಿಂಚಿರುವ ಸಂಖ್ಯೆಯೇ ಹೆಚ್ಚು.

    ಅಲ್ಲಿದೆ ನಮ್ಮನೆ: ಪರಭಾಷೆಗಳಲ್ಲಿ ಬಿಜಿಯಾದ ಕನ್ನಡತಿಯರು...ಸುಮ್ಮನೆ ಲೆಕ್ಕ ಹಾಕಿದರೆ, ಪರಭಾಷೆಗಳಲ್ಲಿ ಇಂದು ಬಿಜಿಯಾಗಿರುವ ಹಲವು ಕನ್ನಡತಿಯರು ಸಿಗುತ್ತಾರೆ. ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್, ನೇಹಾ ಶೆಟ್ಟಿ, ಕೃತಿ ಖರಬಂದ, ಪ್ರಣೀತಾ ಸುಭಾಶ್ … ಹೀಗೆ ಹಲವು ನಟಿಯರು ಕನ್ನಡಕ್ಕಿಂತ ಪರಭಾಷೆಗಳಲ್ಲೇ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿರುವುದು ಗಮನಕ್ಕೆ ಬರುತ್ತದೆ. ಇನ್ನೂ ಕೆಲವರ ಕೈಯಲ್ಲಿ ಒಂದೇ ಒಂದು ಕನ್ನಡ ಚಿತ್ರವೂ ಇಲ್ಲ. ಬೇರೆ ಭಾಷೆಗಳಲ್ಲಿ ಅವರು ಬೇಡಿಕೆಯ ನಟಿಯರು. ಈ ಪಟ್ಟಿಯ ಮುಂಚೂಣಿಯಲ್ಲಿ ನಿಲ್ಲುವುದು ರಶ್ಮಿಕಾ ಮಂದಣ್ಣ. ಈಗಲ್ಲ, ಎರಡು ವರ್ಷಗಳಿಂದ ರಶ್ಮಿಕಾ ಸಾಕಷ್ಟು ತೆಲುಗು ಚಿತ್ರಗಳಲ್ಲಿ ನಟಿಸಿರುವುದಷ್ಟೇ, ಅಲ್ಲಿನ ಟಾಪ್ ಹೀರೋಗಳ ಜತೆಗೆ ನಟಿಸಿ ಬೇಡಿಕೆಯ ನಟಿಯಾಗಿದ್ದಾರೆ. ಅದರಲ್ಲೂ ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕ್ಕೆವರು’ ಚಿತ್ರ ಹಿಟ್ ಆಗಿದ್ದೇ ಆಗಿದ್ದು, ರಶ್ಮಿಕಾಗೆ ಬೇಡಿಕೆ ಹೆಚ್ಚಿದ್ದು, ಎರಡು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇದೆ. ಸದ್ಯ ತೆಲುಗಿನ ‘ಪುಷ್ಪಾ’ ಮತ್ತು ತಮಿಳಿನ ‘ಸುಲ್ತಾನ್’ ಚಿತ್ರಗಳಲ್ಲಿ ನಟಿಸುತ್ತಿರುವ ಅವರ ಕೈಯಲ್ಲಿ ಇನ್ನೂ ಮೂರು ಚಿತ್ರಗಳಿವೆಯಂತೆ. ಶ್ರದ್ಧಾ ಶ್ರೀನಾಥ್ ಸಹ ಕಡಿಮೆಯೇನಿಲ್ಲ. ಲಾಕ್​ಡೌನ್​ಗಿಂತ ಮುಂಚೆಯೇ ತಮಿಳಿನ ‘ಚಕ್ರ’ ಮತ್ತು ‘ಮಾರಾ’ ಹಾಗೂ ತೆಲುಗಿನ ‘ಕೃಷ್ಣ ಆಂಡ್ ಹಿಸ್ ಲೀಲಾ’ ಚಿತ್ರಗಳಲ್ಲಿ ನಟಿಸಿದ್ದ ಶ್ರದ್ಧಾ, ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ ಮೋಹನ್ ಲಾಲ್ ಅಭಿನಯದ ಮಲಯಾಳಂನ ‘ಆರಾಟ್ಟು’ ಮತ್ತು ತಮಿಳಿನ ‘ಕಲಿಯುಗಂ’ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇದಲ್ಲದೆ ರಿಷಭ್ ಶೆಟ್ಟಿ ಅಭಿನಯದ ‘ರುದ್ರಪ್ರಯಾಗ’ ಚಿತ್ರದಲ್ಲೂ ಅವರು ನಟಿಸಬೇಕಿದೆ.

    ಇದನ್ನೂ ಓದಿ: ಡ್ರಗ್ಸ್​ನಿಂದ ಟೈಗರ್​ ಜತೆಗೆ ನಟಿಸೋ ಅವಕಾಶ ಕಳೆದುಕೊಂಡ ಸಾರಾ

    ನಭಾ ನಟೇಶ್ ಅಭಿನಯದ ‘ಸೋಲೋ ಬ್ರತುಕೆ ಸೋ ಬೆಟರ್’ ಎಂಬ ತೆಲುಗು ಚಿತ್ರ ಬಿಡುಗಡೆಗೆ ಸಿದ್ಧವಿದ್ದರೆ, ‘ಅಲ್ಲುಡು ಅಧುರ್ಸ್’ ಮತ್ತು ‘ಅಂಧಾಧುನ್’ನ ತೆಲುಗು ರೀಮೇಕ್​ನಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ, ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಎಂಬ ಚಿತ್ರದಲ್ಲಿ ನೇಹಾ ಶೆಟ್ಟಿ ನಟಿಸುತ್ತಿರುವ ಸುದ್ದಿ ಇತ್ತು. ಈಗ ಅದರ ಜತೆಗೆ, ‘ರೌಡಿ ಬೇಬಿ’ ಎಂಬ ಇನ್ನೊಂದು ತೆಲುಗು ಚಿತ್ರ ಸಹ ಸೇರಿಕೊಂಡಿದೆ. ಇದು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿರುವ ನಟಿಯರ ಸುದ್ದಿಯಾದರೆ, ಕೃತಿ ಖರಬಂದ ಹಿಂದಿ ಚಿತ್ರರಂಗಕ್ಕೆ ಹೋಗಿಯೇ ಐದು ವರ್ಷಗಳಾಗಿವೆ. ಈಗಾಗಲೇ ಅಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, ‘14 ಫೇರೇ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ‘ಭುಜ್: ದಿ ಪ್ರೖೆಡ್ ಆಫ್ ಇಂಡಿಯಾ’ ಚಿತ್ರದಲ್ಲಿ ನಟಿಸಿರುವ ಪ್ರಣೀತಾ ಸುಭಾಶ್, ಪ್ರಿಯದರ್ಶನ್ ನಿರ್ದೇಶನದ ‘ಹಂಗಾಮಾ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಕನ್ನಡದ ನಟಿಯರು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದು ಹೊಸದೇನಲ್ಲ ಮತ್ತು ಅದರಲ್ಲಿ ವಿಶೇಷತೆಯೂ ಇಲ್ಲ. ಈಗಾಗಲೇ ಸಾಕಷ್ಟು ಕನ್ನಡತಿಯರು ಬೇರೆ ಭಾಷೆಗಳಲ್ಲಿ ಮಿಂಚಿದ್ದಾಗಿದೆ. ಆದರೆ, ಹಿಂದೆಂದೂ ಕನ್ನಡದ ನಟಿಯರು ಪರಭಾಷೆಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಗುರುತಿಸಿಕೊಂಡಿರಲಿಲ್ಲ ಎನ್ನುವುದು ವಿಶೇಷ.

    ‘ಅಂಬಿ ನಿಂಗೆ ವಯಸ್ಸಾಯ್ತೋ’ ನಂತರ ಪ್ರಜ್ವಲ್​ ಜತೆಗೆ ಗುರುದತ್​

    ನಾಲ್ಕು ವರ್ಷಗಳ ನಂತರ ಜತೆಯಾಗಿ ನಟಿಸಿದ ಯಶ್​-ರಾಧಿಕಾ

    ಶ್ರೀಮುರಳಿ ಹೊಸ ಚಿತ್ರ ‘ಬಘೀರ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts