ಜೈಲಿನಿಂದ ಬಿಡುಗಡೆಯಾದ ಪರಿಸರ ಪ್ರೇಮಿಗಳಿಗೆ ಅದ್ಧೂರಿ ಸ್ವಾಗತ: ಕೋವಿಡ್​ ನಿಯಮ ಉಲ್ಲಂಘನೆ

Environ
Published on

ಬಾಗಲಕೋಟೆ: ಜೈಲಿಂದ ಬಿಡುಗಡೆಯಾದ ಪರಿಸರ ಪ್ರೇಮಿಗಳಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪರಿಸರ ಪ್ರೇಮಿಗಳಾದ ರಾಜು ದೇಸಾಯಿ, ಪ್ರದೀಪ ದೇಸಾಯಿ ಹಾಗೂ ಯಲ್ಲಟ್ಟಿ ಎಂಬುವವರಿಗೆ ಭಾರೀ ಸ್ವಾಗತ ಕೋರಲಾಗಿದೆ. ಆದರೆ, ಅದ್ಧೂರಿ ಸ್ವಾಗತ ಹೆಸರಿನಲ್ಲಿ ಗ್ರಾಮಸ್ಥರು ಕೋವಿಡ್ ನಿಯಮವನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆ.

ಇತ್ತೀಚೆಗೆ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ತಮದಡ್ಡಿ ಗ್ರಾಮಕ್ಕೆ ಪುನರ್ ವಸತಿ ಕೇಂದ್ರ ನಿರ್ಮಾಣಕ್ಕೆ ಹಂಗಳಿ ಗ್ರಾಮದ ಮುಖಂಡರು ವಿರೋಧ ಮಾಡಿದ್ದರು. ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ತಂಟೆ ತಕರಾರು ನಡೆದು ಮೂವರು ಪರಿಸರ ಪ್ರೇಮಿಗಳನ್ನು ಆಗಸ್ಟ್ 4ರಂದು ಪೊಲೀಸರು ಬಂಧಿಸಿದ್ದರು.

ಆರೋಪಿಗಳನ್ನು ಜಮಖಂಡಿ ಉಪ ಕಾರಾಗೃಹದಲ್ಲಿ ಇರಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ. ತಮ್ಮೂರಿನ ಮುಖಂಡರ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಎರಡು ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಆದಾಗ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿರುವ ವಿಡಿಯೋ ವೈರಲ್ ಈಗ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net