

ಬಾಗಲಕೋಟೆ: ಮುಂಬರುವ ಹಬ್ಬದ ದಿನಗಳಲ್ಲಿ ಕರೊನಾ ನಿಯಮಗಳನ್ನು ತಪ್ಪದೇ ಪಾಲಿಸಬೇಕೆಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದರೂ ಕೂಡ ಸರ್ಕಾರದ ನಿಯಮ ಕಾಗದ ಮೇಲೆ ಸೀಮಿತವಾಗಿದೆ.
ಇಂದು ಮೊಹರಂ ಹಬ್ಬದ ಸಂಭ್ರಮ ಹಿನ್ನೆಲೆಯಲ್ಲಿ ಬಾಗಲಕೋಟೆಯ ಬೀಳಗಿ ಪಟ್ಟಣದಲ್ಲಿ ಅಪಾರ ಜನಸ್ತೋಮ ಒಂದೆಡೆ ಸೇರುವ ಮೂಲಕ ಕರೊನಾ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂದಿತು.
ಬೀಳಗಿ ಪಟ್ಟಣದಲ್ಲಿ ಸಾವಿರಾರು ಜನ ಸೇರಿ ಹಬ್ಬ ಆಚರಣೆ ಮಾಡಿದರು. ಮೆರವಣಿಗೆ, ಹಲಿಗೆ ಮೇಳದ ಸಡಗರದಲ್ಲಿ ಪಾಲ್ಗೊಂಡರು. ಮೊಹರಂ ಮೆರವಣಿಗೆ ವೀಕ್ಷಿಸಲು ಸಾವಿರಾರು ಜನರು ಬೀಳಗಿ ಪಟ್ಟಣದ ಅಂಬೇಡ್ಕರ್ ಸರ್ಕಲ್ನಲ್ಲಿ ಜಮಾಯಿಸಿದರು. (ದಿಗ್ವಿಜಯ ನ್ಯೂಸ್)