ಪುತ್ರ ರಾಜಕಾರಣಕ್ಕೆ ಬರಲ್ಲ

bkt-3-1
ಸಚಿವ ಮುರುಗೇಶ ನಿರಾಣಿ
Published on

ಬಾಗಲಕೋಟೆ: ಬೀಳಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲಿವೆ. ೧.೨೫ ಲಕ್ಷ ಎಕರೆ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.


ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ ತುಂಬಿಸುವ ಯೋಜನೆ, ವಿದ್ಯುತ್ ಸ್ಟೇಶನ್, ರಸ್ತೆ, ಶಾಲಾ-ಕಾಲೇಜುಗಳ ಅಭಿವೃದ್ಧಿ ಮಾಡಲಾಗುವುದು. ಮುಂಬುವರ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿ ಮತಕ್ಷೇತ್ರದಲ್ಲಿ ೨೫ ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ನಮ್ಮ ಕುಟುಂಬದಲ್ಲಿ ನಾನು ಒಬ್ಬನೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಹನುಮಂತ ನಿರಾಣಿ, ನಾನು ಬಿಟ್ಟರೆ ಬೇರೆ ಯಾರಾದರು ಸ್ಪರ್ಧೆ ಮಾಡಿದಲ್ಲಿ ನಾನು ಕಣದಿಂದ ಹಿಂದೆ ಸರಿಯುತ್ತೇನೆ ಎಂದರು.


ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ಬರಲ್ಲ. ಅವನಿಗೆ ಅದು ಆಸಕ್ತಿಯೂ ಇಲ್ಲ. ನಾನು ಕರೆದರೂ ಬರಲ್ಲ. ನನಗೂ ಇಪ್ಪತ್ತು ವರ್ಷ ಜನ ಆಶೀರ್ವಾದ ಮಾಡಿದ್ದಾರೆ. ಸಹೋದರ ಸಂಗಮೇಶ ಸ್ಪರ್ಧೆ ಮಾಡಿದರೇ ನಾನು ನಿವೃತ್ತಿಯಾಗಿ ಫ್ಯಾಕ್ಟರಿ ನೋಡಿಕೊಂಡು ಹೋಗುತ್ತೇನೆ. ನನ್ನ ಮಗನಿಗೆ ಒಂದು ಟಾರ್ಗೆಟ್ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ ಅವರಂತೆ ದೇಶದಲ್ಲಿ ೧೦೧ ಕಾರ್ಖಾನೆ ಸ್ಥಾಪಿಸುವ ಗುರಿ ಹೊಂದಿದ್ದಾನೆ. ಈಗ ಅಪ್ಪಾಜಿ ೫೦ ಮಾಡಿಕೊಡಿ. ಉಳಿದಿದ್ದು ನಾನು ಮಾಡುತ್ತೇನೆ ಅಂತಾನೆ. ಅದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಕೊಡಬಹುದು. ಸದ್ಯ ನನ್ನ ಮಗ ನಿರಾಣಿ ಗ್ರೋಫ ಎಂಡಿ ಇದ್ದಾನೆ. ಈಗ ನಾನು ನಿವೃತ್ತಿ ಆಗಿದ್ದೇನೆ. ನಾನು ಏನು ಇಲ್ಲ. ಎಲ್ಲ ಹೊರಹಾಕ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿದಿದರು.


ನನ್ನ ಕಾರ್ಖಾನೆಗಳಿಂದ ೨೦೨೫ ರೊಳಗೆ ಪ್ರತಿ ದಿನ ೧ ಲಕ್ಷ ೧೦ ಸಾವಿರ ಟನ್ ಕಬ್ಬು ನುರಿಸುವ ಮಾಡುವ ಗುರಿ ಇದೆ. ಅಕ್ಟೋಬರ್ ೨೦೨೪ ರಲ್ಲಿ ೧ ಲಕ್ಷ ೧೦ ಸಾವಿರ ಟನ್ ತಲುಪುತ್ತೇವೆ. ೫೧ ಲಕ್ಷ ಲೀಟರ್ ಪ್ರತಿದಿನ ಎಥಿನಾಲ್ ಮಾಡುವ ಗುರಿ ಇದೆ. ಇದಕ್ಕೆ ಎಲ್ಲ ತಯಾರಿ ನಡೆದಿದೆ. ಅದರ ಜೊತೆಗೆ ಲೋನ್ ಸಹ ಮಂಜೂರು ಆಗುವ ಹಂತದಲ್ಲಿದೆ. ಅದನ್ನ ನೂರಕ್ಕೆ ನೂರರಷ್ಟು ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net