

ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ನಂದಿ ಪರ್ವತದಲ್ಲಿ ಜೈನ ಮಂದಿರದ ಮುನಿ ಆಚಾರ್ಯ ಶ್ರೀ ೧೦೮ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಸಕಲ ಜೈನ ಸಮಾಜದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಧರಣಿ ನಡೆಸಿದ ಜೈನ ಸಮಾಜದ ಬಾಂಧವರು ಜಿಲ್ಲಾಽಕಾರಿ ಜಾನಕಿ ಕೆ.ಎಂ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾಮಕುಮಾರ ಮಹಾರಾಜರ ಹತ್ಯೆಯಾಗಿರುವುದು ಅತ್ಯಂತ ದು:ಖದ ಸಂಗತಿಯಾಗಿದೆ. ಮುನಿ ಮಹಾರಾಜರನ್ನು ತೀವ್ರ ಹಿಂ ಸಾತ್ಮಕ ರೀತಿಯಲ್ಲಿ ಕೊಲೆ ಮಾಡಿರುವುದು ಖಂಡನೀಯ. ಇಂತಹ ಅಹಿತಕರ ಘಟನೆಗಳು ನಾಗರಿಕ ಸಮಾಜದ ಮೇಲೆ ದುಷ್ಟರಿಣಾಮ ಬೀರುತ್ತವೆ. ಶ್ರೀಗಳ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಶಾಂತಿ ಪ್ರಿಯರೂ ಮತ್ತು ಅಹಿಂಸೆಯ ಪ್ರತಿಪಾದಕರೂ ಆಗಿರುವ ಜೈನ ಮುನಿಗಳಿಗೆ ಇಂತಹ ಅಹಿತಕರ ಘಟನೆ ಗಳಿಂದ ತೊಂದರೆಯಾಗದಂತೆ ಸರ್ಕಾರವು ಸೂಕ್ತ ಭದ್ರತೆ ನೀಡಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ವಿ.ಒಂಟಕುದರಿ, ಮಹಾವೀರ ಕೊಠಾರಿ, ಸತೀಶ ಬೇತಾಳ, ಸುನೀಲ ಬೇತಾಳ, ಆನಂದ ಕೊಠಾರಿ, ವಿನೋದ ವಿಮಲ ಬೇತಾಳ, ಆರ್.ಎ.ಪಾಟೀಲ, ಆರ್.ಡಿ.ಬೀಳಗಿ, ಟಿ.ಬಿ.ವಂದಕುದರಿ, ರಾಜೇಶ ಜೈನ, ಸುರೇಖಾ ಬೀಳಗಿ, ಶೈಲಾ ಒಂಟಕುದರಿ, ರಂಜಿತಾ ಒಂಟಕುದರಿ, ಕಾವೇರಿ ಬೀಳಗಿ, ವಂದನಾ ಯಾತಗೇರಿ, ವೈಶಾಲಿ ಸಂಗಮಿ, ಎಂ.ಎಸ್.ಕಬ್ಬಿನ ಸೇರಿದಂತೆ ಸಮುದಾಯ ಮಹಿಳೆರು ಪಾಲ್ಗೊಂಡಿದ್ದರು.