ಕಾಮನ್ ಮ್ಯಾನ್‌ನಿಂದ ಜನಮೆಚ್ಚಿದ ಆಡಳಿತ

bkt-28-8
ಬಾಗಲಕೋಟೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು, ಸಿಎಂ ಬಸವರಾಜ ಬೊಮ್ಮಾಯಿ ಅಭಿಮಾನಿಗಳು ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಶಂಬುಗೌಡ ಪಾಟೀಲ, ಅಪ್ಪಣ್ಣ ಪಿ ಪೂಜಾರ, ಸಂಗಣ್ಣ ಗೌಡರ, ಚಂದ್ರಕಾಂತ ಕೇಸನೂರು, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಗುರು ಅನಗವಾಡಿ, ಅರುಣ ಲೋಕಾಪುರ, ರಾಜು ಗೌಳಿ, ಶ್ರೀಶೈಲ ಅಂಗಡಿ ಇತರರು ಇದ್ದರು.
Published on

ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನುಮ ದಿನ ಹಿನ್ನಲೆಯಲ್ಲಿ ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅವರ ಅಭಿಮಾನಿಗಳು ರೋಗಿಗಳಿಗೆ ಹಣ್ಣು, ಹಂಪಲು, ಬಿಸ್ಕತ್ ವಿತರಿಸಿದರು. ಬಳಿಕ ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿ, ರಾಜ್ಯದ ಜನತೆಗೆ ಕಂಡ ಅತ್ಯಂತ ಸರಳ ಹಾಗೂ ಜನ ಮೆಚ್ಚಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಸಿಎಂ ಹುದ್ದೆಯನ್ನು ಕಾಮನ್ ಮ್ಯಾನ್ ಆಗಿ ಪರಿವರ್ತಿಸಿದ್ದಾರೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಸೇವೆ ರಾಜ್ಯಕ್ಕೆ ಇನ್ನಷ್ಟು ಅಗತ್ಯವಾಗಿವೆ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ಸಂತೋಷ ಹೊಕ್ರಾಣಿ, ಮುಖಂಡರಾದ ಶಂಬುಗೌಡ ಪಾಟೀಲ, ಅಪ್ಪಣ್ಣ ಪಿ ಪೂಜಾರ, ಸಂಗಣ್ಣ ಗೌಡರ, ಚಂದ್ರಕಾಂತ ಕೇಸನೂರು, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಗುರು ಅನಗವಾಡಿ, ಅರುಣ ಲೋಕಾಪುರ, ರಾಜು ಗೌಳಿ, ಶ್ರೀಶೈಲ ಅಂಗಡಿ, ಯಶವಂತ ಅನಂತಪುರ, ರಾಜು ಚಿತ್ತವಾಡಗಿ, ರಾಜು ನಾಯಕ, ನಾಗರಾಜ ಬಾಸೂತಕರ, ಹರೀಶ ರಂಗರೇಜ, ಬಸವರಾಜ ಪಾತ್ರೋಟಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net