ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ

bkt-26-4 a
ವಿವಿ ಸಂಘದ ಕಾಲೇಜು ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಕಾರ್ಯಕ್ರಮ.
Published on

ಬಾಗಲಕೋಟೆ: ನಗರದ ಬಿವಿವಿ ಸಂಘದ ಹಳೇ ಮೈದಾನದಲ್ಲಿ ಶನಿವಾರ ಸಂಜೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯಗಳ ಅಮೃತ-ಸುವರ್ಣ ಸಂಗಮ ಅಂಗವಾಗಿ ಶುಕ್ರವಾರ, ಶನಿವಾರ ಸಂಜೆ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಹಬ್ಬದ ವಾತವರಣ ಸೃಷ್ಟಿಸಿತು. ಕೊಲ್ಲಾಪುರದ ಜಾಗೋ ಹಿಂದೂಸ್ತಾನಿ ತಂಡ ದೇಶ ಭಕ್ತಿಗಳು ಮನಸೂರೆಗೊಂಡವು. ಸಂಗೀತ ಕಟ್ಟಿ ಅವರ ಸಂಗೀತ ಸುಧೆ, ಡಾ.ಅನಂತ ಕುಲಕರ್ಣಿ ಹಾಗೂ ಪಂ.ಸಿದ್ದರಾಮಯ್ಯ ಮಠಪತಿ ಅವರ ಗಾಯನ ಸಂಗೀತ ಲೋಕದಲ್ಲಿ ತೆಲುವಂತೆ ಮಾಡಿತು. ಅಲ್ಲದೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಸಾಮೂಹಿಕ ಗಾಯನ, ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net