ಅವಹೇಳನ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ

bkt-21-2
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ಸಮಾಜದ ಬಾಂಧವರು ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಕೆ.ಎಸ್. ದೇಶಪಾಂಡೆ, ಡಾ.ಗಿರೀಶ ಮಾಸೂರಕರ, ಅನಂತ ಮಳಗಿ, ಗೋಪಾಲ ಜಂಬಗಿ, ಅನೀಲ ಪರಾಂಡೆ, ಸಂಜೀವ ದೇಶಪಾಂಡೆ, ವಿನಾಯಕ ತಾಳಿಕೋಟಿ ಸೇರಿದಂತೆ ಇತರರು ಇದ್ದರು.
Published on

ಬಾಗಲಕೋಟೆ: ಬ್ರಾಹ್ಮಣ ಸಮಾಜದ ಬಗ್ಗೆ ಹಗುರವಾಗಿ ಮಾತನಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ಸಮಾಜ ಬಾಂಧವರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಸಮಾಜದವರು ಜಿಲ್ಲಾಡಳಿತ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಪಾ.ಮಲ್ಲೇಶ ಎಂಬುವರು ನಮ್ಮ ಸಮಾಜದ ಬಗ್ಗೆ ಇತ್ತೀಚೆಗೆ ಅವಹೇಳನ ಹೇಳಿಕೆ ನೀಡಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಮುದ್ರಧಾರಣೆ ಬಗ್ಗೆ ಕೆಲ ದಿನಗಳ ಹಿಂದೆ ಸರ್ಕಾರದ ಮುಜರಾಯಿ ಇಲಾಖೆಯಿಂದ ಅಪಸ್ವರ ಕೇಳಿ ಬಂದಿತ್ತು. ವೇದ, ಉಪನಿಷತ್ತು ಮಹಾಭಾರತದಂತಹ ಮಹಾನ್ ಗ್ರಂಥಗಳ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ವಿಪ್ರ ಸಮಾಜ ಬಾಂಧವರ ಮನಸ್ಸಿಗೆ ನೋವು ಉಂಟು ಮಾಡುವಂತಹ ಸನ್ನಿವೇಶಗಳು ಮೇಲಿಂದ ಮೇಲೆ ನಡೆಯುತ್ತೀವೆ ಎಂದರು.
ಬ್ರಾಹ್ಮಣ ಸಮಾಜದವರು ಎಲ್ಲ ಸಮಾಜಗಳೊಂದಿಗೆ ಬೆರೆತು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ವಸುದೈವಂ ಕುಟುಂಭಕಮ್ ತತ್ವದ ಅಡಿಯಲ್ಲಿ ಬದುಕು ಸಾಗಿಸುವ ಬ್ರಾಹ್ಮಣ ಸಮಾಜದ ವಿರುದ್ಧ ಸಣ್ಣತನದಿಂದ ಮಾತನಾಡುವುದು ತರವಲ್ಲ. ಶಾಂತಿ ಕದಡುವ ವ್ಯಕ್ತಿಗಳಿಗೆ ಸರ್ಕಾರ ಪಾಠ ಕಲಿಸಬೇಕು. ಇಂತಹ ಘಟನೆಗಳು ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ದೇಶಪಾಂಡೆ, ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಾಸೂರಕರ, ಅನಂತ ಮಳಗಿ, ಗೋಪಾಲ ಜಂಬಗಿ, ಅನೀಲ ಪರಾಂಡೆ, ಸಂಜೀವ ದೇಶಪಾಂಡೆ, ವಿನಾಯಕ ತಾಳಿಕೋಟಿ ಸೇರಿದಂತೆ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net