

ಬಾಗಲಕೋಟೆ: ಸಮುದಾಯ ಆರೋಗ್ಯ ಅಽಕಾರಿಗಳ ವೇತನ ಪರಿಷ್ಕರಿಸಬೇಕು, ಪ್ರೋತ್ಸಾಹ ಧನ ೮ ಸಾವಿರದಿಂದ ೧೫ ವರೆಗೆ ಹೆಚ್ಚಿಸಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಜಿಲ್ಲಾಡಳಿತ ಭವನದ ಮುಖ್ಯದ್ವಾರ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬೆಳಗ್ಗೆಯಿಂದ ಸಂಜೆ ವರೆಗೂ ಧರಣಿ ನಡೆಸಿದ ಸಮುದಾಯ ಆರೋಗ್ಯ ನೌಕರರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತ ಭವನ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಸಮುದಾಯ ಆರೋಗ್ಯದ ಅಧಿಕಾರಿಗಳು, ಸಿಬ್ಬಂದಿಗಳು ಅನೇಕ ಕಷ್ಟ-ಸಂಕಷ್ಟ ಎದುರಿಸುತ್ತಿದ್ದಾರೆ. ಇಲಾಖೆ ಅನೇಕ ಕೆಲಸಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಇದರಿಂದ ಪ್ರಾಥಮಿಕವಾಗಿ ಸಮಗ್ರ ೧೨ ಆರೋಗ್ಯ ಸೇವೆಗಳನ್ನು ಒದಗಿಸಲು ಸಮಸ್ಯೆ ಯಾಗುತ್ತಿದೆ. ಹಲವುಬಾರಿ ಸರಪಡಿಸಲು ಮನವಿ ಮಾಡಿದರು ಸ್ಪಂದಿಸುತ್ತಿಲ್ಲ. ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಖಾಯಂಗೊಳಿಸಬೇಕು, ಮುಂಬಡ್ತಿ ಯೋಜನೆ ಅಡಿಯಲ್ಲಿ ಅವಕಾಶ ಕಲ್ಪಿಸಬೇಕು, ವೇತನ ಪರಿಷ್ಕರಣೆ ಮಾಡಬೇಕು, ಕೇಂದ್ರ ಸರ್ಕಾರ ಮಾರ್ಗಸೂಚಿ ಅನ್ವಯ ೮ ಸಾವಿರದಿಂದ ೧೫ ಸಾವಿರ ವರೆಗೆ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಕರ್ತವ್ಯ ಮಾಡಲು ಮುಕ್ತ ಅವಕಾಶ ನೀಡಬೇಕು, ಜನ ಆರೋಗ್ಯ ಸಮಿತಿ ರಚಿಸಬೇಕು, ಕೋವಿಡ್ ವಾರಿಯರ್ಸ ಆಗಿ ಸೇವೆ ಸಲ್ಲಿಸಿದವರಿಗೆ ಕೋವಿಡ್-೧೯ ಗಂಡಾಂತರ ಭತ್ಯ ಬಿಡುಗಡೆ ಮಾಡಬೇಕು. ಎಬಿ, ಎಚ್‌ಡಬ್ಲಸಿ ಗಳಿಗೆ ಬೇಕಾದ ಮೂಲ ಸೌಕರ್ಯ, ಔಷಧಿಗಳು, ಸಲಕರಣೆಗಳು ಹಾಗು ಡಯಗ್ನೋಸ್ಟಿಕ್ ಮಟಿರಿಯಲ್ ಸಕಾಲದಲ್ಲಿ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಸಂಜೀವ ಅರಭಾವಿ, ವಿನೋದ ಗದಗ, ಶಾಂತಿಸಾಗರ ಕೆ., ಗುರಲಿಂಗ ಮಠ. ಶಶಿಕಲಾ ತೊರವಿ, ನೀಲಮ್ಮ ಯತ್ನಟ್ಟಿ ಸೇರಿದಂತೆ ಇತರರು ಇದ್ದರು.