

ಬಾಗಲಕೋಟೆ: ಜೂನಿಯರ್ ಉಪೇಂದ್ರ ಎಂದೇ ಹೆಸರಾಗಿದ್ದ ಮುಧೋಳ್ ನಗರದ ಲಕ್ಷಣ ಅಂಬಿಗೇರ (30) ಅವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.
ಅಂಬಿಗೇರ ಅವರ ಮುಧೋಳ ನಗರದ ಜೂನಿಯರ್ ಉಪೇಂದ್ರ ಎಂದೇ ಪರಿಚಿತರಾಗಿದ್ದರು. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಂಬಿಗೇರ ಅವರು ಆರ್ಕೆಸ್ಟ್ರಾ ಹಾಗೂ ರಸಮಂಜರಿ ಕಾರ್ಯಕ್ರಮ ಕಲಾವಿದ. ನಟ ಉಪೇಂದ್ರ ಅವರ ಮಿಮಿಕ್ರಿ ಹಾಗೂ ನಟನೆ ಮೂಲಕ ಜೂನಿಯರ್ ಉಪೇಂದ್ರ ಎಂಬ ಹೆಸರು ಪಡೆದುಕೊಂಡಿದ್ದರು. ಅಲ್ಲದೆ, ಅಭಿಮಾನಿಗಳನ್ನು ಸಹ ಹೊಂದಿದ್ದರು. ಅವರನ್ನು ನೋಡಿದ ಅನೇಕರು ಅವರೊಂದಿಗೆ ಸೆಲ್ಫಿಯನ್ನು ತೆಗೆದುಕೊಳ್ಳುತ್ತಿದ್ದರು.
ಅಂಬಿಗೇರ ಸಾವಿಗೆ ಆಪ್ತರು ಕಂಬನಿ ಮಿಡಿದಿದ್ದಾರೆ. ಮುಧೋಳ ನಗರದ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. (ದಿಗ್ವಿಜಯ ನ್ಯೂಸ್)