VIDEO| ಅಮಾವಾಸ್ಯೆ ದಿನದಂದೇ ಹೂತಿದ್ದ ಶವವನ್ನು ಹೊತ್ತೊಯ್ದ ದುಷ್ಕರ್ಮಿಗಳು!

Deadbody
Published on

ಬಾಗಲಕೋಟೆ: ಹೂತಿದ್ದ ಶವವನ್ನು ದುಷ್ಕರ್ಮಿಗಳು ಹೊತ್ತೊಯ್ದಿರುವ ಘಟನೆ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ನಡೆದಿದೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ರಾಮಣ್ಣ ತುಮ್ಮರಮಟ್ಟಿ ಎಂಬುವರು ಕಳೆದ ಫೆಬ್ರವರಿ 21 ರಂದು ಶಿವರಾತ್ರಿ ಶಿವಯೋಗದ ದಿನ ಮೃತಪಟ್ಟಿದ್ದರು. ಫೆಬ್ರುವರಿ 22 ರಂದು ಅಂತ್ಯಸಂಸ್ಕಾರ ‌ಮಾಡಲಾಗಿತ್ತು.

ಆದರೆ, ಮೊನ್ನೆ ನಾಗರ(ಭೀಮನ) ಅಮಾವಾಸ್ಯೆ ದಿನ ರಾತ್ರೋರಾತ್ರಿ ದುಷ್ಕರ್ಮಿಗಳು ಶವ ಹೊತ್ತೊಯ್ದಿದ್ದಾರೆ. ರಾಮಣ್ಣ ತುಮ್ಮರಮಟ್ಟಿ ಅವರ ಹೊಲದಲ್ಲೇ ಶವ ಹೂಳಲಾಗಿತ್ತು. ವಾಮಾಚಾರ ಅಥವಾ ನಿಧಿಗಾಗಿ ಹೊತ್ತೊಯ್ದಿರಬಹುದೆಂದು ಸ್ಥಳೀಯರ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದೀಗ ರೂಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net