ರಸ್ತೆ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿ..!

bkt-11-2
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧ್ಯಕ್ಷತೆಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಜರುಗಿತು. ಡಿವೈಎಸ್‌ಪಿ ಪ್ರಸನ್ನ ದೇಸಾಯಿ ಇದ್ದರು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಽಕಾರಿಗಳಿಗೆ ಸೂಚಿಸಿದರು.

ಜಿಲ್ಲಾಽಕಾರಿ ಕಚೇರಿ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತರೆ ಸಾವು-ನೋವುಗಳಿಗಿಂತ ರಸ್ತೆ ಅಪಘಾತದ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಕಳವಳಕಾರಿಯಾದ ಸಂಗತಿಯಾಗಿದೆ ಎಂದರು.

ರಸ್ತೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಎಲ್ಲಿಯೂ ರಾಜಿ ಮಾಡಿಕೊಳ್ಳುವಂತಿಲ್ಲ. ಅವೈಜ್ಞಾನಿಕ ರಸ್ತೆ ತಿರುವುಗಳು ಮತ್ತು ರಸ್ತೆ ನಿರ್ಮಾಣದಿಂದ ಅಮಾಯಕರ ಜೀವಹಾನಿ ಆದ ವರದಿಗಳು ಇರುತ್ತದೆ. ಅಪಘಾತಗಳನ್ನು ತಡೆಯಲು ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ನಿರ್ಮಾಣ, ಗುಣಮಟ್ಟದ ಹೈ ಮಾಸ್ಟ್ ದೀಪಗಳು ರಪ್ಲೆಕಟರ್ ಹಾಗೂ ಸೈನ್ ಬೋರ್ಡ ಅಳವಡಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಹುನಗುಂದ ತಾಲೂಕಿನ ಬಾಣಂತಿಕೊಳ್ಳದಲ್ಲಿ ಹೆಚ್ಚು ಅಪಘಾತಗಳು ಆಗಿರುವ ವರದಿ ಇದ್ದು, ಇಲ್ಲಿನ ರಸ್ತೆಯನ್ನು ಸಂಬಂಧಿಸಿದ ಇಲಾಖೆಯವರು ಸರಿಪಡಿಸಬೇಕು. ಬ್ಲಾಕ್ ಸ್ಪಾಟ್ ನಲ್ಲಿರುವ ರಸ್ತೆಗಳನ್ನು ಪಟ್ಟಿಮಾಡಿ ಆದ್ಯತೆ ಮೇರೆಗೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಆಯಾ ರಸ್ತೆ ಪ್ರಾಧಿಕಾರರನ್ನೇ ಹೊಣೆಗಾರರನ್ನಾಗಿ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು ಎಂದರು.

ಜನರಲ್ಲಿ ರಸ್ತೆ ಸುರಕ್ಷತೆ ಕುರಿತ ಸಾಕ್ಷರತೆ ಕಡಿಮೆ ಇರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯನ್ನು ಇನ್ನು ಮುಂದೆ ಪ್ರತಿ ತಿಂಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

೨೦೨೨ ರಲ್ಲಿ ೯೦೦೦ ರಸ್ತೆ ಅಪಘಾತ
ಡಿವೈಎಸ್‌ಪಿ ಪ್ರಸನ್ನ ದೇಸಾಯಿ ಅವರು ಮಾತನಾಡಿ, ಜಿಲ್ಲೆಯಲ್ಲಿ ೨೦೨೧ರ ವರ್ಷದಲ್ಲಿ ಒಟ್ಟು ೮೦೨ ರಸ್ತೆ ಅಪಘಾತಗಳು ಸಂಭವಿಸಿ, ೩೪೩ ಜನ ಸಾವನ್ನಪ್ಪಿದ್ದರೆ, ೧೦೬೯ ಜನ ಗಾಯಾಳುಗಳಾಗಿರುತ್ತಾರೆ. ೨೦೨೨ರಲ್ಲಿ ಒಟ್ಟು ೯೦೦ ರಸ್ತೆ ಅಪಘಾತಗಳಾಗಿದ್ದು, ೩೭೯ ಸಾವು ಸಂಭವಿಸಿರುತ್ತದೆ ಮತ್ತು ೧೨೮೦ ಜನ ಗಾಯಾಳುಗಳಾಗಿರುತ್ತಾರೆ. ಪ್ರಸ್ತುತ ೨೦೨೩ ವರ್ಷದಲ್ಲಿ ಜನೇವರಿಯಿಂದ ಜೂನ್ ಮಾಹೆಯ ಅಂತ್ಯದವರಿಗೆ ಒಟ್ಟು ೪೪೯ ರಸ್ತೆ ಅಪಘಾತಗಳಾಗಿದ್ದು, ೧೯೫ ಜನ ಸಾವನ್ನು ಹೊಂದಿರುತ್ತಾರೆ ಹಾಗೂ ೬೭೩ ಗಾಯಾಳುಗಳಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಲೋಕಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಾಜ್‌ಶೇಖರ ಕಡಿವಾಲ, ಆರ್‌ಟಿಒ ಅಽಕಾರಿ ಆರ್.ಎಲ್ ಹೊಸಮನಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net