ದಕ್ಷಿಣ ಭಾರತದಲ್ಲಿ ಸಾಧನೆ ಪರ್ವ ಆರಂಭ

bkt-13-9 (2)
ಆಂಧ್ರಪ್ರದೇಶದ ಶ್ರೀಶೈಲಂದಲ್ಲಿ ಶುಕ್ರವಾರ ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನಿತ್ಯ ಅನ್ನದಾನ ಛತ್ರದ ನೂತನ ಕಟ್ಟಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಮಾಜಿ ಸಿಎಂ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಿ.ಸಿ.ಪಾಟೀಲ, ಆಂಧ್ರಪ್ರದೇಶ ಸರ್ಕಾರದ ಹಣಕಾಸು ಸಚಿವ ಭುಗ್ಗನ ರಾಜೇಂದ್ರನಾಥ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಸಿ.ಟಿ.ರವಿ, ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಸಿದ್ದು ಸವದಿ, ತಿರುಮಲ ತಿರುಪತಿ ದೇವಸ್ಥಾನದ ಚೇರಮನ್ ವೈ.ವಿ.ಸುಬ್ಬಾರೆಡ್ಡಿ, ಶ್ರೀಶೈಲಂ ಭ್ರಮರಾಂಭ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಆಡಳಿತಾಧಿಕಾರಿ ಎಸ್.ಲವಣ್ಣ, ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ ಇತರರು ಇದ್ದರು.
Published on

ಬಾಗಲಕೋಟೆ: ಕರ್ನಾಟಕ ರಾಜ್ಯವಲ್ಲದೆ ದಕ್ಷೀಣದ ಬೇರೆ ಬೇರೆ ರಾಜ್ಯಗಳ ಪುಣ್ಯಕ್ಷೇತ್ರ ಶ್ರೀಶೈಲ, ತಿರುಪತಿಯಲ್ಲಿ ಅನ್ನದಾನ ಛತ್ರ ಪ್ರಾರಂಭಿಸುವ ಮೂಲಕ ಬಾಗಲಕೋಟೆಯ ಬಿವಿವಿ ಸಂಘದ ಈಗ ದಕ್ಷಿಣ ಭಾರತದಲ್ಲಿಯೆ ಸಾಧನೆಯ ಪರ್ವವನ್ನು ಪ್ರಾರಂಭಿಸಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆಂಧ್ರಪ್ರದೇಶದ ಶ್ರೀಶೈಲಂದಲ್ಲಿ ಶುಕ್ರವಾರ ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನಿತ್ಯ ಅನ್ನದಾನ ಛತ್ರದ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬಿವಿವಿ ಸಂಘದ ಈ ನಿತ್ಯ ಅನ್ನದಾನ ಛತ್ರದಿಂದ ಶ್ರೀಶೈಲಕ್ಕೆ ಬರುವ ದಕ್ಷಿಣ ಭಾರತದ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದರು.
ಮಾಜಿ ಸಿಎಂ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬಿವಿವಿ ಸಂಘ ವಿದ್ಯಾಕಾಶಿ ಭಾರತದ್ದೂಕ್ಕೂ ದಾಸೋಹ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದಿರುವುದು ಮಾದರಿಯಾಗಿದೆ ಮತ್ತು ಶಿಕ್ಷಣಕ್ಷೇತ್ರದ ಸಾಧನೆ ಜೊತೆಗೆ ಧಾರ್ಮಿಕ ಕ್ಷೇತ್ರಕ್ಕೂ ತನ್ನ ವಿಸ್ತಾರವನ್ನು ಬೆಳೆಸಿರುವುದು ಹೆಮ್ಮೆ ಸಂಗತಿಯಾಗಿದೆ. ಶಾಸಕ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಪ್ರಾಮಾಣಿಕ ಪರಿಶ್ರಮದ ಫಲ ಇಂದು ಸಾರ್ಥಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಿ.ಸಿ.ಪಾಟೀಲ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಸಿ.ಟಿ.ರವಿ, ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಸಿದ್ದು ಸವದಿ, ಆಂಧ್ರಪ್ರದೇಶ ಸರ್ಕಾರದ ಹಣಕಾಸು ಸಚಿವ ಭುಗ್ಗನ ರಾಜೇಂದ್ರನಾಥ, ತಿರುಮಲ ತಿರುಪತಿ ದೇವಸ್ಥಾನದ ಚೇರಮನ್ ವೈ.ವಿ.ಸುಬ್ಬಾರೆಡ್ಡಿ, ಶ್ರೀಶೈಲಂ ಭ್ರಮರಾಂಭ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಆಡಳಿತಾಧಿಕಾರಿ ಎಸ್.ಲವಣ್ಣ, ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ ಇತರರು ಇದ್ದರು.

ಬಾಕ್ಸ್..
ವಿವಿಧ ಶ್ರೀಗಳು ಸಾನ್ನಿಧ್ಯ
ಸಮಾರಂಭದಲ್ಲಿ ಉಜ್ಜಯಿನಿಯ ೧೦೦೮ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀಶೈಲದ ೧೦೦೮ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿ, ಕಾಶಿಯ ೧೦೦೮ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net