ಡಿ.೧೫ ರಂದು ಬಿಜೆಪಿ ಜಿಲ್ಲಾ ಕಚೇರಿ ಉದ್ಘಾಟನೆ

bkt-7-10
ನವನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ,ಮಂಡಲ ಪದಾಕಾರಿಗಳ ,ಪಕ್ಷದ ಪ್ರಮುಖರ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಬಿಜೆಪಿ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ ಮಾತನಾಡಿದರು. ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ವಿಭಾಗ ಸಹಪ್ರಭಾರಿ ಬಸವರಾಜ ಯಂಕಂಚಿ ಇದ್ದರು.
Published on

ಬಾಗಲಕೋಟೆ: ನವನಗರದಲ್ಲಿರುವ ಬಿಜೆಪಿ ನೂತನ ಜಿಲ್ಲಾ ಕಾರ್ಯಾಲಯ ಉದ್ಘಾಟನೆ ಡಿ.೧೫ ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ .ಪಿ ನಡ್ಡಾರವರ ಅಮೃತ ಹಸ್ತದಿಂದ ನೆರವೇರಲಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ ಹೇಳಿದರು.
ನವನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ,ಮಂಡಲ ಪದಾಧಿಕಾರಿಗಳ ,ಪಕ್ಷದ ಪ್ರಮುಖರ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕಾರ್ಯಕ್ರಮ ಕುರಿತು ಅವರು ಮಾಹಿತಿ ನೀಡಿದರು.
ಬಾಗಲಕೋಟೆ ಬಿಜೆಪಿ ಕಾರ್ಯಾಲಯದ ಉದ್ಘಾಟನೆ ಜೊತೆಗೆ ೧೧ ಜಿಲ್ಲೆಗಳ ಕಾರ್ಯಾಲಯಗಳು ಕೂಡ ಇಲ್ಲಿಂದಲೇ ವರ್ಚುವಲ್ ಮುಖಾಂತರ ಉದ್ಘಾಟನೆಗೊಳ್ಳಲಿವೆ. ಉದ್ಘಾಟನಾ ಕಾರ್ಯಕ್ರಮದ ನಿಮಿತ್ಯವಾಗಿ ವಿವಿಧ ಸಮಿತಿಗಳ ರಚನೆ ಮಾಡಲಾಗಿದೆ ಎಂದರು.
ಡಿ.೧೧ ರಂದು ಕಟ್ಟಡದ ವಾಸ್ತು ಶಾಂತಿ ,ಹೋಮ ಹವನ ಇನ್ನಿತರ ಪೂಜಾ ವಿಽವಿಧಾನಗಳನ್ನು ನೆರವೇರಿಸುವಂತೆ ಪಕ್ಷದ ಸೂಚನೆಯ ಬಗ್ಗೆಯೂ ತಿಳಿಸಿ ಪೂಜಾ ಕೈಂಕರ್ಯ ಮಾಡುವಂತೆ ಈಗಾಗಲೇ ನಿಶ್ಚಿಯಿಸಿರುವ ವಿಚಾರ ತಿಳಿಸಿದರು.
ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ವಿಭಾಗ ಸಹಪ್ರಭಾರಿ ಬಸವರಾಜ ಯಂಕಂಚಿ , ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂ.ಕೆ.ಪಟ್ಟಣಶೆಟ್ಟಿ ,ವಿ.ಪ.ಮಾಜಿ ಸದಸ್ಯರಾದ ನಾರಾಯಣಸಾ ಭಾಂಡಗೆ, ಜಿ.ಎಸ್.ನ್ಯಾಮಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net