

ಪುತ್ತೂರು ಗ್ರಾಮಾಂತರ: ಪಾಣಾಜೆ ಗ್ರಾಮದ ಸೂರಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರಿನ ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಪುತ್ತೂರು ರೋಟರಿ ಕ್ಲಬ್ ಯುವ ಮತ್ತು ಪುತ್ತೂರಿನ ಮುಳಿಯ ಜುವೆಲ್ಲರ್ಸ್ ಸಂಸ್ಥೆಯವರು ಕೊಡುಗೆಯಾಗಿ ನೀಡಿದ ಶಾಲಾ ಬ್ಯಾಗ್, ನೋಟ್‌ಬುಕ್ ಮತ್ತು ಸಮವಸ್ತ್ರವನ್ನು ಶುಕ್ರವಾರ ವಿತರಿಸಲಾಯಿತು.
ಪುತ್ತಿಲ ಪರಿವಾರ ಪುತ್ತೂರು ಘಟಕದ ವಕ್ತಾರ ಸುನೀಲ್ ಬೋರ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಕೊಡುಗೆಗಳನ್ನು ಮಕ್ಕಳಿಗೆ ವಿತರಿಸಿ, ಮಕ್ಕಳು ತಮಗೆ ಸಿಗುವ ಸವಲತ್ತು ಪಡೆದುಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ತಾರಾನಾಥ್ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪಾಣಾಜೆ ಘಟಕ ಅಧ್ಯಕ್ಷ ರಮೇಶ್ ಭಟ್ ಬೊಳ್ಳುಕಲ್ಲು ಮತ್ತು ಕಾರ್ಯದರ್ಶಿ ಪುಷ್ಪರಾಜ್ ರೈ ಕೋಟೆ ಮಾತನಾಡಿದರು. ಪುತ್ತೂರು ರೋಟರಿ ಕ್ಲಬ್ ಯುವದ ನಿಯೋಜಿತ ಅಧ್ಯಕ್ಷೆ, ಮುಳಿಯ ಜುವೆಲ್ಲರ್ಸ್‌ನ ಅಶ್ವಿನಿಕೃಷ್ಣ ಮುಳಿಯ ಮತ್ತು ಅವರ ಪುತ್ರಿ ಇಷಾ ಸುಲೋಚನಾ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.
ಕ್ಷೇತ್ರ ಶಿಕ್ಷಣ ಇಲಾಖೆ ಬೆಟ್ಟಂಪಾಡಿ ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ ಪ್ರಸಾದ್ ಕೊಡುಗೆ ನೀಡಿದ ಸಂಸ್ಥೆಗಳಿಗೆ ಇಲಾಖೆ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀನಿವಾಸ ಪ್ರಸಾದ್, ಮುಳಿಯ ಜುವೆಲ್ಲರ್ಸ್ ಸಂಸ್ಥೆ ಸಿಬ್ಬಂದಿ ಸಂಜೀವ, ಸ್ಥಳೀಯರಾದ ಸೂರ್ಯನಾರಾಯಣ ತೂಂಬಡ್ಕ, ಪುತ್ತಿಲ ಪರಿವಾರ ಪಾಣಾಜೆ ಗ್ರಾಮ ಸಮಿತಿ ಪ್ರದೀಪ್ ಪಾಣಾಜೆ, ಶಂಕರ್ ಭರಣ್ಯ, ಗುರುರಾಜ್ ಭರಣ್ಯ, ಸಹ ಶಿಕ್ಷಕ ನಾಗೇಶ್ ಪಾಟಾಳಿ, ಗೌರವ ಶಿಕ್ಷಕಿಯರಾದ ವಿದ್ಯಾಲಕ್ಷ್ಮಿ ಮತ್ತು ಯಶಸ್ವಿನಿ ಇದ್ದರು.
ಮುಖ್ಯಶಿಕ್ಷಕಿ ಊರ್ಮಿಳಾ ಪ್ರಸ್ತಾವಿಸಿ. ಎಸ್‌ಡಿಎಂಸಿ ಸದಸ್ಯ ವಸಂತ ಕುರೂಪ್ ವಂದಿಸಿ, ಸಹಶಿಕ್ಷಕಿ ಪವಿತ್ರಾ ಎಂ.ಆರ್.ವಂದಿಸಿ, ಅತಿಥಿ ಶಿಕ್ಷಕಿ ಸುಪ್ರೀತಾ ಕೆ.ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಮಕ್ಕಳ ಶಿಕ್ಷಣ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡುಗೆ ನೀಡಿದ ಪುತ್ತಿಲ ಪರಿವಾರ ಸಂಘಟನೆ ಅರುಣ್‌ಕುಮಾರ್ ಪುತ್ತಿಲ ಮತ್ತು ಮುಳಿಯ ಜುವೆಲ್ಲರ್ಸ್ ಸಂಸ್ಥೆ ಅಶ್ವಿಕೃಷ್ಣ ಮುಳಿಯ ಅವರನ್ನು ಶಾಲೆಯ ಪರವಾಗಿ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.