ವಾಹನ ಅಡ್ಡವಿಟ್ಟು ಹಲ್ಲೆ- ಇತ್ತಂಡಗಳಿಂದ ದೂರು

Published on

ವಿಟ್ಲ: ವಾಹನಗಳನ್ನು ಅಡ್ಡವಿಟ್ಟು ಮಾತಿನ ಚಕಮಕಿ ನಡೆಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿಕೊಂಡ ವಿಚಾರದಲ್ಲಿ ದೂರು ಪ್ರತಿದೂರು ದಾಖಲಾಗಿದೆ.


ಕನ್ಯಾನದ ಪ್ರಕಾಶ(೪೬) ಶುಕ್ರವಾರ ಸಾಯಂಕಾಲ ಸ್ಕೂಟರಿನಲ್ಲಿ ಗಣೇಶ್ ಅವರನ್ನು ಕೂರಿಸಿಕೊಂಡು ಕನ್ಯಾನ-ಬಾಯಾರು ರಸ್ತೆಯಲ್ಲಿ ಬಾಯಾರು ಕಡೆಗೆ ಹೋಗುತ್ತಿರುವಾಗ ಕನ್ಯಾನ ಶಾಲಾ ಬಳಿ, ಅಪಾಯಕಾರಿಯಾಗಿ ಬಿಳಿ ಬಣ್ಣದ ಕಾರನ್ನು ಚಲಾಯಿಸಿದ್ದನ್ನು ಚಾಲಕನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಿನ ಚಾಲಕ ಹಾಗೂ ಅದರಲ್ಲಿದ್ದ ಮೂವರು ಕನ್ಯಾನದ ಒಡಿಯೂರು ಐಟಿಐ ಕಾಲೇಜಿನ ಬಳಿ ಸ್ಕೂಟರಿಗೆ ಕಾರನ್ನು ಅಡ್ಡವಾಗಿ ಇಟ್ಟು, ತಡೆದು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿ ಕಾರಿನಲ್ಲಿ ಪರಾರಿಯಾಗಿದ್ದಾರೆಂದು ದೂರಿನಲ್ಲಿ ಹೇಳಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕನ್ಯಾನ ಮಹಮ್ಮದ್ ಸಯಾಫ್ (೨೫) ಶುಕ್ರವಾರ ಸಾಯಂಕಾಲ ಕಾರಿನಲ್ಲಿ ಸ್ನೇಹಿತರಾದ ರಾಝಿಕ್ ಮತ್ತು ಅಬ್ದುಲ್ ಖಾದರ್ ಎಂಬುವರ ಜತೆ ಕನ್ಯಾನದಿಂದ ತನ್ನ ಮನೆ ಕಡೆಗೆ ಹೋಗುತ್ತಿರುವಾಗ ಕನ್ಯಾನ ಭಜನಾ ಮಂದಿರದ ಬಳಿ ಪ್ರಕಾಶ ಹಾಗೂ ಗಣೇಶ ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ ನಿಲ್ಲಿಸಿ ಪ್ರಕಾಶ್ ಸಯಾಫ್ ಹಾಗೂ ಅಬ್ದುಲ್ ಖಾದರ್ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳಿಯರು ಸೇರಿದಾಗ ಇಬ್ಬರೂ ದ್ವಿಚಕ್ರ ವಾಹನ ಸಮೇತ ಹೋಗಿರುತ್ತಾರೆ. ಮಹಮ್ಮದ್ ಸಯಾಫ್ ಹಾಗೂ ಅಬ್ದುಲ್ ಖಾದರ್ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿ ದೂರು ನೀಡಿದ್ದು, ಪ್ರತಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net