

ಕಾರ್ಕಳ: ಕಾಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಬಾಲಕರ ಹಾಗೂ ಬಾಲಕಿಯರ ಎರಡೂ ತಂಡ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲಕರ ತಂಡದಿಂದ ಏಳನೇ ತರಗತಿ ಅಶ್ವಿನ್ ಶೆಟ್ಟಿ, ಪ್ರೆಸ್ಟನ್ ಡಿಸೋಜ, ಆರನೇ ತರಗತಿಯ ವಿಹಾನ್ ಪೂಜಾರಿ, ರಿಸ್ಟನ್ ಸೆರಾವೋ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದರೆ. ಬಾಲಕಿಯರ ತಂಡದಿಂದ ಏಳನೇ ತರಗತಿಯ ಖುಷಿ ಶೆಟ್ಟಿ, ವಿಶ್ಮಿತಾ, ಆರನೇ ತರಗತಿಯ ಮೆಲ್ರಿನ್ ಫೆರ್ನಾಂಡಿಸ್ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ನಾಯ್ಕ, ಲಾವಣ್ಯಾ ತಂಡದ ನೇತೃತ್ವ ವಹಿಸಿದ್ದರು.