

ಬದಿಯಡ್ಕ: ವಿಶ್ರಾಂತ ಪ್ರಾಧ್ಯಾಪಕಿ, ಸಾಹಿತಿ ಡಾ.ಯು.ಮಹೇಶ್ವರಿ ಅವರ ಬದುಕು ಬರಹದ ಸಾಹಿತ್ಯ ಸಲ್ಲಾಪ ಕಾರ್ಯಕ್ರಮ ಪರಕ್ಕಿಲದ ಶ್ರೀಮಹಾದೇವ ಕ್ಷೇತ್ರದ ನಟರಾಜ ಮಂಟಪದಲ್ಲಿ ಭಾನುವಾರ ಜರುಗಿತು.
ಬದಿಯಡ್ಕ ಸಮತಾ ಸಾಹಿತ್ಯ ವೇದಿಕೆ, ತರುಣ ಕಲಾವೃಂದ ಉಳಿಯ ಆಯೋಜಿಸಿದ ಕಾರ್ಯಕ್ರಮವನ್ನು ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸಭೆ ಅಧ್ಯಕ್ಷತೆ ವಹಿಸಿದ್ದರು. ಡಾ.ರಮಾನಂದ ಬನಾರಿ, ಕಾಸರಗೋಡು ಚಿನ್ನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ.ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮೀಕ್ಷೆಯಲ್ಲಿ ಕಾವ್ಯದ ಬಗ್ಗೆ ಸೌಮ್ಯ ಪ್ರಸಾದ್, ಅಂಕಣ ಹಾಗೂ ಲೇಖನ ಬರಹಗಳ ಬಗ್ಗೆ ಕಾರ್ತಿಕ್ ಪಡ್ರೆ, ವಿಮರ್ಶೆ, ಸಂಶೋಧನಾ ಲೇಖನಗಳ ಬಗ್ಗೆ ಡಾ.ಸುಭಾಷ್ ಪಟ್ಟಾಜೆ ವಿಷಯ ಮಂಡಿಸಿದರು. ಮಹೇಶ್ವರಿ ಅವರೊಡನೆ ಸಂವಾದ ಕಾರ್ಯಕ್ರಮದಲ್ಲಿ ಕವಿಗಳಾದ ಟಿ.ಎ.ಎನ್.ಖಂಡಿಗೆ, ಬಾಲಕೃಷ್ಣ ಬೇರಿಕೆ, ವಿಕ್ರಂ ಕಾಂತಿಕೆರೆ ಪಾಲ್ಗೊಂಡರು.
ವಿಶಾಲಾಕ್ಷ ಪುತ್ರಕಳ ಸಮನ್ವಯಕಾರರಾಗಿದ್ದರು. ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಕವಿಗಳು ಸ್ವರಚಿತ ಕವನ ವಾಚಿಸಿದರು. ಗೌರವ ಅಭಿನಂದನೆ ಕಾರ್ಯಕ್ರಮದಲ್ಲಿ ಡಾ.ಯು.ಮಹೇಶ್ವರಿ ಅವರನ್ನು ಅಭಿನಂದಿಸಲಾಯಿತು.
ಕ.ಸಾ.ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಮಧುರಕಾನನ ಗೋಪಾಲಕೃಷ್ಣ ಭಟ್ ಅಭಿನಂದನಾ ಭಾಷಣಗೈದರು. ಡಾ.ವೇದಾವತಿ, ಲಕ್ಷ್ಮೀ ಕೆ ಗುರು ನಮನ ಸಲ್ಲಿಸಿದರು. ಟಿ.ಶಂಕರ ನಾರಾಯಣ ಭಟ್, ಸುರೇಶ್ ಯು.ಆರ್ ಉಪಸ್ಥಿತರಿದ್ದರು. ಉದಯ ಕುಮಾರ್ ಮುಂಡೋಡು ಸ್ವಾಗತಿಸಿದರು. ದಿವ್ಯಾ ಗಟ್ಟಿ ಉಳಿಯ ನಿರೂಪಿಸಿದರು.