ಹೊಂದಾಣಿಕೆಯ ಕೆಲಸದಿಂದ ಶಾಲೆ ಅಭಿವೃದ್ಧಿ : ನಾರಾಯಣ ರೈ ಅಭಿಪ್ರಾಯ

New Project (35)
Published on

ಪುತ್ತೂರು ಗ್ರಾಮಾಂತರ: ಶತಮಾನೋತ್ಸವದ ಸಂಭ್ರಮದಲ್ಲಿರುವ ಬಡಗನ್ನೂರು ಸರ್ಕಾರಿ ಶಾಲೆಗೆ ಉತ್ತಮವಾದ ಸಭಾಂಗಣದ ಅವಶ್ಯಕತೆ ಇರುವುದನ್ನು ಮನಗಂಡು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಎಸ್‌ಡಿಎಂಸಿ ಸಮಿತಿ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಈಡೇರಿಸುವ ಕೆಲಸ ಆಗಿದೆ. ಮುಂದೆ ಶಾಲಾಭಿವೃದ್ಧಿ ಸಮಿತಿಗೆ ಬಹಳಷ್ಟು ಜವಾಬ್ದಾರಿಯಿದ್ದು, ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಮಾತ್ರ ಶಾಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ಹಿರಿಯ ವಿದ್ಯಾರ್ಥಿ ಸಂಘ ಗೌರವಾಧ್ಯಕ್ಷ ನಾರಾಯಣ ರೈ ಕುದ್ಕಾಡಿ ಅವರು ಹೇಳಿದರು.

ಬಡಗನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾಭಿವೃದ್ಧಿ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬಡಗನ್ನೂರು ಗ್ರಾಪಂ ಸದಸ್ಯ ಸಂತೋಷ ಆಳ್ವ ಗಿರಿಮನೆ, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಬಾಬು ಮೂಲ್ಯ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಮತ್ತಿತರರಿದ್ದರು.

ನೂತನ ಸಮಿತಿ ರಚನೆ

ಶಾಲಾಭಿವದ್ಧಿ ಸಮಿತಿ ಅಧ್ಯಕ್ಷರಾಗಿ ಗಿರೀಶ್ ಗೌಡ ಕನ್ನಯ, ಉಪಾಧ್ಯಕ್ಷರಾಗಿ ಸುಲೋಚನಾ ಎಸ್.ನಾಯ್ಕ ನೇರ್ಲಂಪಾಡಿ, ಸದಸ್ಯರಾಗಿ ಕಾವ್ಯಾ, ದಾಮೋದರ ಪಿ., ಬಾಬು ಮೂಲ್ಯ, ಚಂದ್ರಿಕಾ, ಉಷಾಲತಾ, ಲತಾ ಕುಮಾರಿ, ಶೋಭಾ ಬಿ., ವಿಜಯಕುಮಾರ ಪಿ., ಸುಮಯ್ಯ, ರೈಹಾನ, ಸೆಮಿರಾ, ಪೌಝಿಯಾ, ರೈಹಾನಾ ಎಸ್.ಎಂ., ವಿಜಯಲಕ್ಷ್ಮೀ, ಸುನೀತಾ ಎ., ಸಾವಿತ್ರಿ ಎ.ಬಿ. ಅವರನ್ನು ಆಯ್ಕೆ ಮಾಡಲಾಯಿತು. ಪದ ನಿಮಿತ್ತ ಸದಸ್ಯರಾಗಿ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ. ಮತ್ತು ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ, ನಾಮ ನಿರ್ದೇಶಕ ಸದಸ್ಯರಾಗಿ ಗ್ರಾಪಂ ಸದಸ್ಯ ಸಂತೋಷ ಆಳ್ವ, ಪದವಿಧರ ಶಿಕ್ಷಕಿ ವಿಜಯಲಕ್ಷ್ಮೀ, ಶಾಲಾ ನಾಯಕಿ ಫಾತಿಮತ್ ಶಫಾ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net