

ವಿರಾಜಪೇಟೆ: ಪುರಸಭೆ ಕೈಗೊಳ್ಳುವ ಕಾಮಗಾರಿಗಳಿಗೆಂದು ನೂತನವಾಗಿ ಖರೀದಿಸಲಾದ ಬ್ಯಾಕ್ ಹೋಲ್ ಲೋಡರ್ ಯಂತ್ರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಶುಕ್ರವಾರ ಚಾಲನೆ ನೀಡಿದರು.
ಪುರಸಭೆ ಕಚೇರಿ ಆವರಣದಲ್ಲಿ ವಾಹನದ ರಿಬ್ಬನ್ ಕತ್ತರಿಸಿ ಮಾತನಾಡಿದ ಶಾಸಕರು, ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿರಾಜಪೇಟೆ ಪುರಸಭೆಗೆ ಈ ಯಂತ್ರದ ಅವಶ್ಯಕತೆ ಇದ್ದು, ಇದರ ಸೇರ್ಪಡೆಯಿಂದ ಪುರಸಭೆ ಕಾಮಗಾರಿಗಳು ಮತ್ತಷ್ಟು ವೇಗ ಪಡೆಯಲು ಸಹಕಾರಿಯಾಗಲಿದೆ. ಇದರ ಸದುಪಯೋಗವನ್ನು ಅಧಿಕಾರಿಗಳು ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುವ ಮೂಲಕ ಕಷ್ಟ-ಸುಖಗಳಿಗೆ ಸ್ಪಂದಿಸಬೇಕೆಂದು ಸಲಹೆ ನೀಡಿದರು. ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಉಪಾಧ್ಯಕ್ಷೆ ಫಜಿಯ ತಬಸುಂ, ಮುಖ್ಯಾಧಿಕಾರಿ ನಾಚಪ್ಪ ಇತರರಿದ್ದರು.