ಉಪೇಕ್ಷಿತ ಶಿಶುವಿನ ತಾಯಿ ಪತ್ತೆ : ಶಾಲಾ ಜಗಲಿಯಲ್ಲಿ ಸಿಕ್ಕಿದ್ದ ಮಗು

Baby
Published on

ಸುಳ್ಯ: ಶಾಲಾ ಜಗಲಿಯಲ್ಲಿ ನವಜಾತ ಶಿಶುವನ್ನು ಇರಿಸಿ ಹೋಗಿದ್ದ ಪ್ರಕರಣ ಭೇದಿಸಿರುವ ಆದೂರು ಪೊಲೀಸರು ಮಗುವಿನ ತಾಯಿಯನ್ನು ಪತ್ತೆ ಹಚ್ಚಿದ್ದಾರೆ.

ಎರಡು ದಿನಗಳ ಹಿಂದೆ ಪಂಜಿಕಲ್ಲು ಶಾಲಾ ಜಗಲಿಯಲ್ಲಿ ನವಜಾತ ಶಿಶುವನ್ನು ಯಾರೋ ಬಿಟ್ಟು ಹೋಗಿದ್ದರು. ಮಗು ಅಳುತ್ತಿರುವುದನ್ನು ಕೇಳಿ ಸನಿಹದ ಮನೆಯವರು ಬಳಿಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಶಾಲೆ ಆದೂರು ಠಾಣಾ ವ್ಯಾಪ್ತಿಗೆ ಒಳಪಟ್ಟ ಕಾರಣ ಆದೂರು ಪೊಲೀಸರು ಬಂದು ಮಗುವನ್ನು ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯ ಬಳಿಕ ಪೊಲೀಸರು ಆ ಮಗುವಿನ ತಾಯಿ ಹಾಗೂ ಅಜ್ಜಿಯನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಹೆಸರುಗಳನ್ನು ಪೊಲೀಸರು ಗೌಪ್ಯವಾಗಿರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net