ದೈವಸ್ಥಾನದ ಕಳ್ಳನ ಪತ್ತೆ ಮಾಡಿಕೊಟ್ಟ ಬಬ್ಬುಸ್ವಾಮಿ !

babbuswami
Published on

ಉಡುಪಿ: ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕಳವು ಮಾಡಿದ್ದ ಕಳ್ಳನನ್ನು 24 ಗಂಟೆಯೊಳಗೆ ಬಂಧಿತನಾಗಿದ್ದಾನೆ. ದೈವವೇ ಪತ್ತೆ ಮಾಡಿಕೊಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಉಡುಪಿ ಸಮೀಪದ ಚಿಟ್ಟಾಡಿ ವಾರ್ಡ್‌ನ ಕಸ್ತೂರಬಾ ನಗರದದಲ್ಲಿ ಈ ಅಚ್ಚರಿ ಸಂಭವಿಸಿದೆ.
ಜುಲೈ 4ರಂದು ರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನವಾಗಿದ್ದು, ಭಕ್ತರು ಆತಂಕಕ್ಕೊಳಗಾಗಿದ್ದರು. ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮರುದಿನ ಭಕ್ತರು ದೈವದ ದರ್ಶನ ನಡೆಸಿ ದೂರು ನೀಡಿದ್ದರು. ರಾತ್ರಿ ಕಳೆಯುವುದರೊಳಗಾಗಿ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಜುಲೈ 6ರ ಬೆಳಗ್ಗೆ ನಗರದ ಬಸ್ ನಿಲ್ದಾಣದಲ್ಲಿ ಮಲಗಿದ್ದವನನ್ನು ನೋಡಿದ ಆಟೋ ಚಾಲಕರೊಬ್ಬರು, ‘ದೈವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯದಲ್ಲಿದ್ದ ಕಳ್ಳ ಆತನೇ ಎಂಬುದನ್ನು ಪತ್ತೆ ಹಚ್ಚಿದ್ದರು. ಪೊಲೀಸರು ಬಂದು ವಿಚಾರಿಸಿದಾಗ, ಆತ ಬಾಗಲಕೋಟೆಯ ಮುದುಕಪ್ಪ ಎಂದು ಪರಿಚಯ ತಿಳಿಸಿ ಕಳ್ಳಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ದೈವದ ಕಾರಣಿಕಕ್ಕೆ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net