ಬಾಬ್ ಮಾರ್ಲಿ ಫರ್ಮ್ ಕೋಡಿಹಳ್ಳಿ ನಾಟಕ ಪ್ರದರ್ಶನ ನ.21 ರಂದು

Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಜನರಿಗೆ ಉತ್ತಮ ನಾಟಕಗಳನ್ನು ನೋಡುವ ಅಭಿರುಚಿ ಮತ್ತು ಸಂಗೀತಾಸಕ್ತಿ ಬೆಳೆಸುವ ಸದ್ದುz್ದೆÃಶದಿಂದ `ಬಾಬ್ ಮಾರ್ಲಿ ಫರ್ಮ್ ಕೋಡಿಹಳ್ಳಿ` ನಾಟಕ ಪ್ರದರ್ಶವನ್ನು ನ.೨೦ ರಂದು ಸಂಜೆ ೬-೩೦ ಗಂಟೆಗೆ ನಗರದ ಎಸ್.ಎಂ.ಪAಡಿತ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯ ಕಲಬುರಗಿ ಸಂಚಾಲಕ ಡಾ.ಶ್ರೀಶೈಲ ಘೂಳಿ ತಿಳಿಸಿದರು.

ರಂಗಾಯಣ ಕಲಬುರಗಿ, ಸಮುದಾಯ ಕಲಬುರಗಿ ಜಂಟಿಯಾಗಿ ನಾಟಕವನ್ನು ಆಯೋಜಿಸಿದ್ದು ಬೆಂಗಳೂರಿನ ಜಂಗಮ ಕಲೆಕ್ಟಿವ್ ತಂಡದ ಕಲಾವಿದರು ಅಭಿಯನಿಸಲಿದ್ದಾರೆ. ಸಂಗೀತದ ಮೂಲಕ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ ಬಾಬ್ ಮಾರ್ಲಿ ಕುರಿತ ವಿಶಿಷ್ಟ ನಾಟಕವಾಗಿದೆ. ಹನುಮಂತಯ್ಯ ಅವರು ರಚಿಸಿದ್ದಾರೆ ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿಗಳ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್.ಪಾಟೀಲ್ ನಾಟಕ ಪ್ರದರ್ಶನವನ್ನು ಉದ್ಘಾಟಿಸುವರು. ಪ್ರಮುಖರಾದ ಆರ್.ಕೆ.ಹುಡಗಿ,ಡಾ.ಮೀನಾಕ್ಷಿ ಬಾಳಿ,ಡಾ.ಸುಜಾತಾ ಜಂಗಮಶೆಟ್ಟಿ,ಡಾ.ಶಿವಶರಣಪ್ಪ ಮೂಳೆಗಾಂವ,ಡಾ.ಅರುಣ ಜೋಳದಕೂಡ್ಲಗಿ, ಲಕ್ಷö್ಮಣ ಕೆ.ಪಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅಧ್ಯಕ್ಷತೆಯನ್ನು ಲೇಖಕ ದತ್ತಾತ್ರೇಯ ಇಕ್ಕಳಕಿ ವಹಿಸುವರು.

ಸಂದೀಪ ಮಾಳಗೆ, ಕಲ್ಯಾಣಿ ಭಜಂತ್ರಿ ಮತ್ತು ಮೇಘಾ ಚಿಚಕೋಟಿ ತಂಡದವರು ಜನಪದ ಹಾಡುಗಳನ್ನು ಪ್ರಸ್ತುತಪಡಿಸುವರು.

ಇದೊಂದು ಮಾದರಿಯಾಗಿರುವ ಮತ್ತು ಸಮಾನತೆ ಸಂದೇಶ ಸಾರುವ ನಾಟಕವಾಗಿದ್ದು, ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ವೀಕ್ಷಿಸಬೇಕು ಎಂದು ಘೂಳಿ ಮನವಿ ಮಾಡಿದರು. ಸುದ್ದಿಗೊಷ್ಠಿಯಲ್ಲಿ ದತ್ತಾತ್ರೇಯ ಇಕ್ಕಳಕಿ, ಅಶೋಕ ಶೆಟಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net