ಸಂಗಮಕ್ಕೆ ಬಾಗಿನ ಅರ್ಪಣೆ

bagina
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಬಾಗಿನ ಸಮರ್ಪಣೆ, ಗಂಗಾಪೂಜಾ ವಿಧಿವಿಧಾನ ಜರಗಿತು.
Published on

ಉಪ್ಪಿನಂಗಡಿ: ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ - ಕುಮಾರಧಾರಾ ನದಿಗಳೆರಡು ಶ್ರೀ ಸಹಸ್ರಲಿಂಗೇಶ್ವರ ದೇಗುಲದ ಮುಂಭಾಗದಲ್ಲಿ ನಡೆದ ಪವಿತ್ರ ಸಂಗಮದ ವೇಳೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಬಾಗಿನ ಸಮರ್ಪಣೆ, ಗಂಗಾಪೂಜಾ ವಿಧಿವಿಧಾನಗಳು ಜರಗಿ ಪವಿತ್ರ ಸಂಗಮ ತೀರ್ಥಸ್ನಾನ ನೆರವೇರಿತು.

ದೇವಳದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯರ ವೇದಮಂತ್ರ ಘೋಷಣೆಯೊಂದಿಗೆ ನಡೆದ ಗಂಗಾಪೂಜೆಯಲ್ಲಿ ಸಮಸ್ತ ಭಕ್ತಾದಿಗಳ ಪರವಾಗಿ ಶಾಸಕರು ಗಂಗಾಮಾತೆಗೆ ಬಾಗಿನ ಸಮರ್ಪಿಸಿ ಪ್ರಾರ್ಥಿಸಿದರು. ಗಂಗಾಮಾತೆಗೆ ಜೈಕಾರ ಹಾಕುತ್ತಾ ಭಕ್ತಾದಿಗಳು ತೀರ್ಥ ಸಂಪ್ರೋಕ್ಷಣೆಗೈದರು. ಹಲವರು ತೀರ್ಥಸ್ನಾನ ಮಾಡಿದರು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ದೇವಿದಾಸ್ ರೈ, ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ, ರಮ್ಯಾ ರಾಜಾರಾಮ್, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಶರತ್ ಕೋಟೆ, ಡಾ.ರಾಜಾರಾಮ್ ಕೆ.ಬಿ. ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net