ಶಾಸಕ ಹರೀಶ್ ಪೂಂಜಗೆ ಅಂಗರಕ್ಷಕ ನಿಯೋಜನೆ

harish poonja
Published on

ಬೆಳ್ತಂಗಡಿ: ಬೆದರಿಕೆ ಹಿನ್ನೆಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ರಾಜ್ಯ ಅಂಗರಕ್ಷಕ ಭದ್ರತಾ ಪುನರ್ ವಿಮರ್ಶಣಾ ಸಮಿತಿ ಸೂಚನೆ ಮೇರೆಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಅಂಗರಕ್ಷಕರನ್ನು ನಿಯೋಜಿಸಲು ಆದೇಶಿಸಲಾಗಿದೆ.

ರಾಜ್ಯ ಅಂಗರಕ್ಷಕ ಭದ್ರತಾ ಪುನರ್ ವಿಮರ್ಶಣಾ ಸಮಿತಿ ಶಾಸಕ ಹರೀಶ್ ಪೂಂಜ ಅವರ ಪ್ರಸ್ತುತ ಬೆಳವಣಿಗೆ ಅವಲೋಕಿಸಿ ಬೆದರಿಕೆ ಗ್ರಹಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸೂಚನೆ ನೀಡಿದಂತೆ ದ.ಕ. ಪೊಲೀಸ್ ಅಧೀಕ್ಷಕ ಅವರ ಆದೇಶದ ಮೇರೆಗೆ ಸೋಮವಾರ ಜಾರಿಗೆ ಬರುವಂತೆ ಓರ್ವ ಅಂಗರಕ್ಷಕನನ್ನು ನಿಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net