ಭದ್ರಾವತಿಯನ್ನು ಕಾಂಗ್ರೆಸ್​ನವರು ಪಾಕಿಸ್ತಾನ ಮಾಡಲು ಹೊರಟಿದ್ದಾರೆಯೇ?: ಸಚಿವ ಬಿ. ಶ್ರೀರಾಮುಲು ಪ್ರಶ್ನೆ

Sriramulu
Published on

ಚಿತ್ರದುರ್ಗ: ಭದ್ರಾವತಿಯನ್ನು ಕಾಂಗ್ರೆಸ್​ನವರು ಪಾಕಿಸ್ತಾನ ಮಾಡಲು ಹೊರಟಿದ್ದಾರೆಯೇ? ಎಂದು ಕಾಂಗ್ರೆಸ್ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದರು.

ತಾಲೂಕಿನ ಬೆಳಗಟ್ಟ ಶ್ರೀ‌ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕಾಲ ಚಕ್ರ ಹೀಗೆ ಇರುವುದಿಲ್ಲವೆಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಹೇಳಿದ್ದೆ. ಬಿಜೆಪಿ, ಹಿಂದು ಪರ ಸಂಘಟನೆಯ ಸಾವಿರಾರು ಕಾರ್ಯಕರ್ತರ ವಿರುದ್ಧ ಕೇಸು ಹಾಕಿ ರೌಡಿ ಶೀಟ್ ಒಪನ್ ಮಾಡಿದ್ದೀರಲ್ಲಾ? ಆಗ ಎಲ್ಲಿ ಹೋಗಿತ್ತು ನಿಮ್ಮ ಬುದ್ದಿ? ಸ್ವಾರ್ಥದಿಂದ ಶಾಸಕ ಸಂಗಮೇಶ್ ಮಗನ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದರು.

ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಲು ನಿಮಗೆ ಯಾವ ನೈತಿಕತೆ ಇದೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ‌ ಸಚಿವ ಜನಾರ್ದನ ರೆಡ್ಡಿ ಎಲ್ಲೂ ಓಡಾಡಬಾರದೆ? ಈಗ ಚುನಾವಣೆ ಬಂದಿಲ್ಲ. ನಾನು ಮೊಳಕಾಲ್ಮೂರಿಗೆ ಬಂದಿದ್ದು ಪಕ್ಷದ ತೀರ್ಮಾನ. ಉಸ್ತುವಾರಿ ಬದಲಿಸಿ ಎಂದು ಕೇಳಿಲ್ಲ. ಜಲಸಂಪನ್ಮೂಲ ಖಾತೆ ಹಂಚಿಕೆ ಸಿಎಂ ವಿವೇಚನೆಗೆ ಬಿಟ್ಟಿದೆ. ಸಿಡಿ ಪ್ರಕರಣದಲ್ಲಿ‌ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net