

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡ ಪರ ಹೆಬ್ಬೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ಕೈಗೊಂಡರು. ಬೃಹತ್ ಸೇಬಿನ ಹಾರ ಹಾಕಿ ಬಿಎಸ್‌ವೈ ಸ್ವಾಗತಿಸಲಾಯಿತು.
ಸುರೇಶಗೌಡರು ಇಡೀ ರಾಜ್ಯದಲ್ಲೇ ಮಾದರಿ ಶಾಸಕರಂತೆ ಕೆಲಸ ಮಾಡಿದ್ದರು.ಅವರನ್ನು ದ್ರೋಹದಿಂದ, ಮೋಸದಿಂದ ಸೋಲಿಸುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿದ ಸುರೇಶಗೌಡರನ್ನು ಈ ಸಲ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಬೇಕು ಎಂದು ಯಡಿಯೂರಪ್ಪ ಮನವಿಮಾಡಿದರು.
ಸಂಸದ ಜಿ.ಎಸ್.ಬಸವರಾಜು, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತಿತರರು ಸಾಥ್ ನೀಡಿದರು.