

ಕಲಬುರಗಿ : ಮನೆ ಹಂಚಿಕೆ ಮಾಡಲು ಹಣ ಪಡೆಯಲಾಗುತ್ತಿದೆ ಎಂದು ವಸತಿ ಇಲಾಖೆ ಅಕ್ರಮ ಬಯಲು ಮಾಡಿದ್ದ ಆಳಂದ ಶಾಸಕರಾಗಿರುವ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರಿಗೆ ರಾಜ್ಯ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೆವಾಲಾ ತುರ್ತು ಬೆಂಗಳೂರಿಗೆ ಬರುವಂತೆ ಕರೆ ನೀಡಿದ್ದಾರೆ.
ಪಕ್ಷದ ವರಿಷ್ಠರ ಬುಲಾವ್‌ನಂತೆ ಪಾಟೀಲ್ ಅವರು ಭಾನುವಾರ ರಾತ್ರಿ ಕಲಬುರಗಿ ನಗರದಿಂದ ಬಸವ ಎಕ್ಸ್ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ರಾಜಧಾನಿಗೆ ತೆರಳುವ ಮುನ್ನ ರೈಲು ನಿಲ್ದಾಣದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಬಿ.ಆರ್.ಪಾಟೀಲ್, ಸುರ್ಜೆವಾಲಾ ಅವರು ನನಗೆ ಸೋಮವಾರ ಬೆಳಗ್ಗೆ ೧೧-೩೦ ಗಂಟೆಗೆ ಭೇಟಿಯಾಗಲು ಕರೆದಿz್ದÁರೆ. ಭೇಟಿಗಾಗಿ ಬೆಂಗಳೂರಿಗೆ ತೆರಳುತ್ತಿz್ದೆÃನೆ. ಏನು ಚರ್ಚೆಯಾಗುತ್ತೆ ಎನ್ನುವುದು ಹೇಳಲು ನಾನು ಭವಿಷ್ಯಕಾರನಲ್ಲ. ಬೇರೆ ಯಾರನ್ನು ಕರೆದಿz್ದÁರೆ ಎಂಬುದು ಗೊತ್ತಿಲ್ಲ. ನನಗೆ ಕರೆದಿz್ದÁರೆ ಹೋಗುವೆ. ಸಿಎಂ, ಡಿಸಿಎಂ ಮುಂದೆ ಏನು ಹೇಳಿರುವೆ ಅದನ್ನೇ ಸುರ್ಜೆವಾಲಾ ಮುಂದೆ ಹೇಳುವೆ. ಸಿಎಂ ಜತೆಗೂ ಚರ್ಚಿಸುವೆ ಎಂದರು. ಸೆಪ್ಟೆಂಬರನಲ್ಲಿ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದರು.