ಕೋಲಾರಕ್ಕೆ ನೂತನ ಎಸ್​ಪಿಯಾಗಿ ಬಿ.ನಿಖಿಲ್ ನೇಮಕ

sp kolar
Published on

ಕೋಲಾರ: ಜಿಲ್ಲೆಗೆ ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಬಿ.ನಿಖಿಲ್​ ಅವರನ್ನು ಬುಧವಾರ ಸರ್ಕಾರ ನೇಮಕ ಮಾಡಿದ್ದು, ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ನಾರಾಯಣ್​ ಅವರನ್ನು ಉತ್ತರಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ರಾಯಚೂರಿನಲ್ಲಿ ಎಸ್​ಪಿಯಾಗಿ ಉತ್ತಮ ಕಾರ್ಯನಿರ್ವಹಿಸಿರುವ ಬಿ.ನಿಖಿಲ್​ ಅವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಲಾಗಿದೆ. ನೇರ ಐಪಿಎಸ್​ ಗ್ರೇಡ್​ ಅಧಿಕಾರಿಯಾಗಿದ್ದ ಕಾರ್ತಿಕ್​ರೆಡ್ಡಿ ಕೋಲಾರದಿಂದ ವರ್ಗಾವಣೆಯಾದ 4 ವರ್ಷಗಳ ನಂತರ ಬಿ.ನಿಖಿಲ್​ರನ್ನು ನೇರ ಐಪಿಎಸ್​ ಗ್ರೇಡ್​ ಅಧಿಕಾರಿಯಾಗಿ ಕೋಲಾರಕ್ಕೆ ಸರ್ಕಾರ ನೇಮಿಸಿದೆ.

ಪೋಲಿಸ್​ ಇಲಾಖೆ ದೃತಿಗೆಡದೆ ಧೈರ್ಯವಾಗಿ ಪ್ರಕರಣ ಭೇಧಿಸುವ ಕೆಲಸ ಮಾಡುತ್ತಿದ್ದರೂ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ನಿಮಾರ್ಣವಾಗಿತ್ತು. ಪೋಲಿಸ್​ ಇಲಾಖೆಯು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಲೇ ಇತ್ತು. ಆದರೆ ಅಪರಾಧ ಪ್ರಕರಣಗಳ ಸಂಖ್ಯೆ ದಿನೇದಿನೆ ಏರುಮುಖವಾಗತೊಡಗಿದವು. ಇದರಿಂದ ಖಡಕ್​ ಅಧಿಕಾರಿ ಒಬ್ಬರನ್ನು ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಇಲಾಖೆ ಚಿಂತನೆಯಲ್ಲಿತ್ತು. ಜತೆಗೆ ಜಿಲ್ಲೆಯ ಜನಪ್ರತಿನಿಧಿಗಳೂ ಒಬ್ಬ ಖಡಕ್​ ಅಧಿಕಾರಿಯನ್ನು ನೇಮಕ ಮಾಡುವಂತೆ ಇಲಾಖೆಗೆ ಒತ್ತಾಯಿಸಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net