

ಬೆಂಗಳೂರ: ದೊಡ್ಡನೆ ಕುಡಿ ಯುವರಾಜ್ಕುಮಾರ್ ಹಾಗೂ ಶ್ರೀದೇವಿ ಬೈರಪ್ಪ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇಂದು (ಜುಲೈ 04) ವಿಚ್ಛೇದನ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದು, ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ.
ಯುವರಾಜ್ಕುಮಾರ್ ಸಲ್ಲಿಸಿದ ವಿಚ್ಛೇದನ ಅರ್ಜಿಗೆ ಶ್ರೀದೇವಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದು, ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣೆ ಕುರಿತು ವಾದ ಮಂಡಿಸಲು ಶ್ರೀದೇವಿ ಪರ ವಕೀಲರು ಅವಕಾಶ ಕೋರಿದ್ದಾರೆ. ಆಕ್ಷೇಪಣೆಗೆ ಸಮ್ಮತಿಸಿದ ನ್ಯಾಯಧೀಶರು ಇದು ಕೌಟುಂಬಿಕ ಕಲಹವಾದ್ದರಿಂದ ಮೊದಲು ಕೌನ್ಸಲಿಂಗ್ ಆಗಬೇಕು. ಅದು ಮುಕ್ತಾಯ ಆದ ಬಳಿಕವಷ್ಟೆ ಆಕ್ಷೇಪಣೆ ಕೇಳಲಾಗುತ್ತದೆ.
ಯುವ ರಾಜ್‌ಕುಮಾರ್ ಅವರ ಡಿವೋರ್ಸ್ ಪ್ರಕರಣವನ್ನ ನ್ಯಾಯಾಲಯ ಮೀಡಿಯೇಷನ್ ಕೌನ್ಸಿಲಿಂಗ್‌ಗೆ ರೆಫರ್ ಮಾಡಿದೆ. ಮೀಡಿಯೇಷನ್ ಕೌನ್ಸಿಲಿಂಗ್ ಮುಗಿದ ಬಳಿಕ ಇಬ್ಬರ ತೀರ್ಮಾನವನ್ನ ಕೋರ್ಟ್ ಕೇಳಲಿದೆ. ಆನಂತರವಷ್ಟೇ ಆಕ್ಷೇಪಣೆಯ ವಾದ ಆಲಿಸುವುದಾಗಿ ಹೇಳಿದ ನ್ಯಾಯಾಧೀಶರು ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದ್ದಾರೆ. ಮೀಡಿಯೇಷನ್ ಕೌನ್ಸಿಲಿಂಗ್‌ಗೆ ಆಗಸ್ಟ್ 23 ರಂದು ದಿನಾಂಕ ನಿಗದಿಯಾಗಿದೆ. ಆಗಸ್ಟ್ 23 ರಂದು ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿಗೆ ಕೌನ್ಸಿಲಿಂಗ್ ನಡೆಯಲಿದೆ. ಕೌನ್ಸಿಲಿಂಗ್ ವರದಿ ಆಧಾರದ ಮೇಲೆ ಮುಂದಿನ ವಿಚಾರಣೆ ನಡೆಯಲಿದೆ.
2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವರಾಜ್ಕುಮಾರ್ ಹಾಗೂ ಶ್ರೀದೇವಿ ಅವರ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಸುದ್ದಿಗೋಷ್ಠಿ ನಡೆಸಿದ್ದ ಯುವ ರಾಜ್ ಕುಮಾರ್ ಪರ ವಕೀಲರು, ಶ್ರೀದೇವಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀದೇವಿ, ಯುವ ರಾಜ್ ಕುಮಾರ್ ಹಾಗೂ ಸಪ್ತಮಿ ಗೌಡ ಅಕ್ರಮ ಸಂಬಂಧದಲ್ಲಿದ್ದಾರೆ. ಇಬ್ಬರೂ ಒಟ್ಟಿಗೆ ರೂಂ ನಲ್ಲಿ ಶ್ರೀದೇವಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು ಎಂದು ಆರೋಪಗಳು ಕೇಳಿ ಬಂದಿದ್ದವು. ಅದಕ್ಕೆ ಸಾಕ್ಷಿ ಎಂಬಂತೆ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಮೆರಿಕಕ್ಕೆ ಓದಲು ತೆರಳಿದ್ದ ಶ್ರೀದೇವಿ ವಿಚ್ಛೇದನ ಅರ್ಜಿ ಸಲ್ಲಿಕೆಯಾದ ಬಳಿಕ ಭಾರತಕ್ಕೆ ಮರಳಿದ್ದು ಕಳೆದ ಕೆಲವು ದಿನಗಳಿಂದಲೂ ಇಲ್ಲಿಯೇ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ರೀದೇವಿ, ನನಗೆ ಅಂಟಿರುವ ಕಳಂಕ ಹೋಗಲಾಡಿಸಿಕೊಳ್ಳುವವರೆಗೆ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.