

ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನವು ರಾಜಾ ಸರ್ ಮುತ್ತಯ್ಯ ಚೆಟ್ಟಿಯಾರ್ ಮತ್ತು ರುಕ್ಷ್ಮಿಣಿದೇವಿ ಅರುಂಡೇಲ್ ದತ್ತಿನಿಧಿಯಡಿ ಆ.25ರಂದು ಬೆಳಿಗ್ಗೆ 10.30ಕ್ಕೆ ಭಕ್ತಿಗೀತೆ ಗಾಯನ ಮತ್ತು ಭರತನಾಟ್ಯ ಸ್ಪರ್ಧೆ ಹಮ್ಮಿಕೊಂಡಿದೆ.
ಕೆ.ಮೋಹನ್ ದೇವ್ ಆಳ್ವ ಮತ್ತು ಎಂ.ಕೆ. ಶೈಲಜಾ ಆಳ್ವ ದಂಪತಿ ಪ್ರತಿಷ್ಠಾನದಲ್ಲಿ ಈ ದತ್ತಿ ಸ್ಥಾಪಿಸಿದ್ದಾರೆ. ಸ್ಪರ್ಧೆಯನ್ನು 13ರಿಂದ 16 ವರ್ಷದವರಿಗೆ ಆಯೋಜಿಸಲಾಗಿದೆ. ಪ್ರಥಮ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ 4 ಸಾವಿರ, 3 ಸಾವಿರ ಹಾಗೂ 2 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.
ಆಸಕ್ತರು ಪ್ರತಿಷ್ಠಾನದಿಂದ ಅರ್ಜಿ ಪಡೆದು, ವಯಸ್ಸಿನ ದೃಢೀಕರಣದೊಂದಿಗೆ ಆ. 15ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು. ವಿಳಾಸ: ಬಿ.ಎಂ.ಶ್ರೀ. ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೊನಿ, ಬೆಂಗಳೂರು560004. ಮೊ: 9972812127 ಸಂಪರ್ಕಿಸುವಂತೆ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.