ಅಧ್ಯಕ್ಷರಾಗಿ ಬಿ.ಚಂದ್ರಕಲಾ ಪ್ರಭು ಆಯ್ಕೆ

ಅಧ್ಯಕ್ಷರಾಗಿ ಬಿ.ಚಂದ್ರಕಲಾ ಪ್ರಭು ಆಯ್ಕೆ
Published on

ಮಳವಳ್ಳಿ: ತಾಲೂಕಿನ ಹಂಗ್ರಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿ.ಚಂದ್ರಕಲಾ ಪ್ರಭು ಮತ್ತು ಉಪಾಧ್ಯಕ್ಷರಾಗಿ ಮಮತಾ ಮಹೇಶ್ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆಡಳಿತ ಮಂಡಳಿಯ 10 ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ನಡೆದಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ 10 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಬಿ.ಚಂದ್ರಕಲಾ ಪ್ರಭು ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯಾಗಿ ಮಮತಾ ಮಹೇಶ್ ಅವಿರೋಧ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆ ಸುಜಾತಾ ಕಾರ್ಯ ನಿರ್ವಹಿಸಿದ್ದರು.

ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯನ್ನು ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭು ಅವರು ಅಭಿನಂದಿಸಿ ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ನಮ್ಮ ನಾಯಕರಾದ ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಅವರ ಸಹಕಾರದಿಂದ ಹಂಗ್ರಾಪುರ ಗ್ರಾಮದ ನಾಲ್ಕು ಗ್ರಾಪಂ ಸದಸ್ಯ ಸ್ಥಾನಗಳನ್ನೂ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದೆವು. ಅದೇ ರೀತಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಡೇರಿ ಆಡಳಿತ ಮಂಡಳಿಯನ್ನು ಸಂಪೂರ್ಣ ಕಾಂಗ್ರೆಸ್ ಬೆಂಬಲಿತರು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಅದರಲ್ಲೂ ಬಿ.ಚಂದ್ರಕಲಾ ಅವರು ಹಾಲು ಉತ್ಪಾದಕ ಸದಸ್ಯರ ವಿಶ್ವಾಸವನ್ನು ಗಳಿಸಿಕೊಳ್ಳುವ ಮೂಲಕ ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಯಾಗಿರುವುದು ಶ್ಲಾಘನೀಯವೆಂದು ಪ್ರಶಂಸಿದರು.

ಸಂಘದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಹಾಗೂ ಸಹಕರಿಸಿದ ಗ್ರಾಮದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು. ಸಂಘದ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸರ್ವ ಸದಸ್ಯರ ಏಳಿಗೆಗೆ ಶ್ರಮಿಸುವಂತೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಅವರಿಗೆ ಸಲಹೆ ನೀಡಿದರು.

ಅಧ್ಯಕ್ಷೆ ಬಿ.ಚಂದ್ರಕಲಾ ಮಾತನಾಡಿ, ಸಂಘದ ಸದಸ್ಯರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ನಿರ್ದೇಶಕರಾದ ನಾಗರತ್ನಾ, ನಾಗಮ್ಮ, ಹನುಮಮ್ಮ, ರೂಪಾರಾಣಿ, ನಂಜಮ್ಮ, ಭ್ರಮರಾಂಬ, ಚಂದ್ರಮ್ಮ, ಮಹದೇವಮ್ಮ, ನಾಮ ನಿರ್ದೇಶಿತ ನಿರ್ದೇಶಕಿ ಲೀಲಾವತಿ, ಸಂಘದ ಕಾರ್ಯದರ್ಶಿ ಸುನಿತಾ, ಹಾಲು ಪರೀಕ್ಷಕಿ ಸೌಮ್ಯಾ, ಗ್ರಾಪಂ ಸದಸ್ಯೆ ಮಂಗಳಮ್ಮ, ಮುಖಂಡರಾದ ಛೇರ್ಮನ್ ಮಹದೇವಪ್ಪ, ಎಚ್.ವಿ.ಚಂದ್ರು, ಎಚ್.ಸಿ.ಮಹೇಶ್, ಶ್ರೀನಾಥ್, ವೆಂಕಟೇಶ್ ನಂಜುಂಡಸ್ವಾಮಿ, ಪುಟ್ಟಸ್ವಾಮಿ, ಶಾಂತಪ್ಪ, ಚಿಕ್ಕಮೊಗ, ಬಲ್ಲೇಗೌಡ, ಡಿ.ಕಾರಯ್ಯ, ಪ್ರಕಾಶ್, ಎಚ್.ಸಿ.ಚನ್ನಬಸಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net