

ಮುಳ್ಳೇರಿಯ: ಬೆಳ್ಳಿಚೆಡವಿನ ಈಶ್ವರಮಂಗಲ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ದ್ವಿತೀಯ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವದ ಪ್ರಯುಕ್ತ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯರಿಂದ ಸಮರ ಸನ್ನಾಹ-ಭೀಷ್ಮ ಸೇನಾಧಿಪತ್ಯ ಪ್ರಸಂಗದ ತಾಳಮದ್ದಳೆ ನಡೆಯಿತು.
ಯಕ್ಷಗುರು ವಿಶ್ವವಿನೋದ ಬನಾರಿ ಮಾರ್ಗದರ್ಶನದಲ್ಲಿ ಮೋಹನ ಮೆಣಸಿನಕಾನ ಮತ್ತು ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಭಾಗವತರಾಗಿ ಪ್ರಸಂಗ ಮುನ್ನಡೆಸಿದರು. ಚೆಂಡೆ-ಮದ್ದಳೆಯಲ್ಲಿ ವಿಷ್ಣುಶರಣ ಬನಾರಿ ಹಾಗೂ ಶ್ರೀಧರ ಆಚಾರ್ಯ ಈಶ್ವರಮಂಗಲ ಸಹಕರಿಸಿದರು.
ಸರಿತಾ ರಮಾನಂದ ರೈ ದೇಲಂಪಾಡಿ, ಶಾಂತಕುಮಾರಿ ದೇಲಂಪಾಡಿ, ಜಲಜಾಕ್ಷಿ ಸತೀಶ್ ರೈ ಬೆಳ್ಳಿಪ್ಪಾಡಿ, ನಳಿನಾಕ್ಷಿ ಹರೀಶ್ ಗೌಡ ಮುದಿಯಾರು, ಸುಜಾತ ಮೋಹನ್ ದಾಸ ರೈ ದೇಲಂಪಾಡಿ, ಶೀಲಾವತಿ ಹೇಮನಾಥ್ ಕೇದಗಡಿ, ಸುಮಲತಾ ಉದಯ್ ಕುಮಾರ್ ದೇಲಂಪಾಡಿ, ಪವಿತ್ರ ದಿವಾಕರ ಮುದಿಯಾರು, ಕುಸುಮಾವತಿ ಜಯಪ್ರಕಾಶ್ ಕುತ್ತಿಮುಂಡ ಪಾತ್ರಗಳನ್ನು ನಿರ್ವಹಿಸಿದರು.
ನಾರಾಯಣ ದೇಲಂಪಾಡಿ ಅವರ ಅರ್ಥ ಸಾಹಿತ್ಯ ಪ್ರಸಂಗ, ಎಂ.ರಮಾನಂದ ರೈ ದೇಲಂಪಾಡಿ ಅವರ ಸಂಯೋಜನೆ, ಜಲಜಾಕ್ಷಿ ರೈ ಪಾತ್ರ ಪರಿಚಯ, ಚಂದ್ರಶೇಖರ ಗುರುಸ್ವಾಮಿ ಅವರ ನೇತೃತ್ವ, ರಾಮ ನಾಯ್ಕ ದೇಲಂಪಾಡಿ ಪ್ರಾಯೋಜಕತ್ವ ನೀಡಿದ್ದರು.