ಶಂಕರ ಧರ್ಬೆತ್ತಡ್ಕ ಮೌನ ಸಾಧಕ : ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ

Published on

ಬದಿಯಡ್ಕ: ಶಂಕರ ಧರ್ಬೆತ್ತಡ್ಕ ಮೌನ ಸಾಧಕ. ಯಾವುದೇ ರೀತಿಯ ಪ್ರಚಾರ ಬಯಸದೆ ಜನ ಸೇವೆಯೇ ಜನಾರ್ದನ ಸೇವೆ ಎಂದು ನಂಬಿದವರು. ಜನಪ್ರತಿನಿಧಿಯಾಗಿ ಅವರ ನಡಿಗೆ ಈಗ 25ರ ಕಡೆಗೆ ಸಾಗುತ್ತಿದೆ ಎಂದು ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಹೇಳಿದರು.

ಅಂಬೇಡ್ಕರ್ ವಿಚಾರವೇದಿಕೆ ಬಾರಡ್ಕದ ವತಿಯಿಂದ ಬಾರಡ್ಕದಲ್ಲಿ ಭಾನುವಾರ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಬಾರಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಗೌರವಾಧ್ಯಕ್ಷ ಆನಂದ ಕೆ.ಮವ್ವಾರು, ಅಧ್ಯಕ್ಷ ವಸಂತ ಅಜಕ್ಕೋಡು, ರಾಮಪ್ಪ ಮಂಜೇಶ್ವರ, ಗಂಗಾಧರ ಗೋಳಿಯಡ್ಕ, ಹರೀಶ್ಚಂದ್ರ ಪುತ್ತಿಗೆ, ಚಂದ್ರಶೇಖರ, ಸುಭಾಷ್ ಪೆರ್ಲ, ಮಾಧವ ತೆಕ್ಕೆಕರೆ, ವಿಜಯವಿಕ್ರಮ್ ಶುಭಹಾರೈಸಿದರು.

ಶಂಕರ ದರ್ಬೆತ್ತಡ್ಕ ಅವರನ್ನು ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಅಭಿನಂದಿಸಲಾಯಿತು. ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಭಿನಂದನಾ ಭಾಷಣ ಮಾಡಿದರು. ಕೇರಳ ರಾಜ್ಯೋದಯ ಜಿಲ್ಲಾ ಸನ್ಮಾನ ಸ್ವೀಕರಿಸಿದ ಕವಿ, ಸಂಘಟಕ ಸುಂದರ ಬಾರಡ್ಕ ಅವರನ್ನು ಅಭಿನಂದಿಸಲಾಯಿತು. ವೇದಿಕೆ ಅಧ್ಯಕ್ಷ ರಾಮಪಟ್ಟಾಜೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net