

ಬೆಂಗಳೂರು: ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಮಿಷನ್ ಯೋಜನೆಯಡಿ 5 ಕ್ರಿಟಿಕಲ್ ಕೇರ್ ಬ್ಲಾಕ್‌ಗೆ ಅಗತ್ಯ ಇರುವ 168 ಸಿಬ್ಬಂದಿ ನೇಮಕಕ್ಕೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
ವಿಜಯಪುರ (100 ಹಾಸಿಗೆ), ತುಮಕೂರು (100 ಹಾಸಿಗೆ), ಕೋಲಾರ (50 ಹಾಸಿಗೆ), ಉಡುಪಿ (50 ಹಾಸಿಗೆ) ಮತ್ತು ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆ (100 ಹಾಸಿಗೆ)ಗಳ ಕ್ರಿಟಿಕಲ್ ಕೇರ್ ಬ್ಲಾಕ್‌ಗೆ ಅಗತ್ಯ ಇರುವ ಸರ್ಜನ್, ಫಿಜೀಷಿಯನ್, ವಿಕಿರಣಶಾಸಜ್ಞ, ನರ್ಸ್, ಗ್ರೂಪ್ -ಡಿ ದರ್ಜೆ ನೌಕರರ ನೇಮಕಕ್ಕೆ ಅನುಮೋದನೆ ನೀಡಲಾಗಿದೆ.
ಸಿಬ್ಬಂದಿ ವೆಚ್ಚವನ್ನು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಮಿಷನ್ ಯೋಜನೆಯಡಿ ಭರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.