ಆಯುರ್ವೇದ ಮಾಹಿತಿ ಕಾರ್ಯಕ್ರಮ

kvg
Published on

ಸುಳ್ಯ: ನಗರದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದದ ಮಹತ್ವ ಎಂಬ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಮಾಹಿತಿ ಕಾರ್ಯಾಗಾರವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ವಿಜಯಲಕ್ಷ್ಮೀ ಪಿ. ಬಿ. ನಡೆಸಿಕೊಟ್ಟರು. ಮಹಿಳಾ ಸಮಾಜದ ಪದಾಧಿಕಾರಿಗಳು, ಮಹಿಳಾ ಮಂಡಳಿಗಳ ಸದಸ್ಯರುಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ಮಹಿಳಾ ಮಂಡಳಿ ಒಕ್ಕೂಟ ಅಧ್ಯಕ್ಷೆ ಮಧುಮತಿ ಬೊಳ್ಳೂರು ಪ್ರಸ್ತಾವನೆಗೈದರು. ಒಕ್ಕೂಟ ಉಪಾಧ್ಯಕ್ಷೆ ಪುಷ್ಪಾ ಡಿ.ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಅನಿತಾ ಸುತ್ತುಕೋಟೆ ವಂದಿಸಿದರು. ಹೇಮಾ ವೇಣುಗೋಪಾಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net