

ಬಂಟ್ವಾಳ: ವಿಧಾನ ಪರಿಷತ್‌ಗೆ ದ.ಕ. ಸ್ಥಳೀಯ ಸಂಸ್ಥೆಗಳಿಂದ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಜಯಗಳಿಸಿದ ಹಿನ್ನೆಲೆಯಲ್ಲಿ ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಿಧಾನ ಪರಿಷತ್ ಚುನಾವಣೆಯ ಬಂಟ್ವಾಳ ಮಂಡಲದ ಚುನಾವಣಾ ಸಂಚಾಲಕ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಕುಲಾಲ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ ಪೂಜಾರಿ, ದಾಮೋದರ ಪೂಜಾರಿ, ಉದಯ ಪೂಜಾರಿ, ಚಂದ್ರ ಪೂಜಾರಿ ಕುಕ್ಕಿಪಾಡಿ, ಸಿದ್ದಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ, ಪ್ರಮುಖರಾದ ನವೀನ್ ಹೆಗ್ಡೆ, ಚಂದ್ರಶೇಖರ ಕರ್ಪೆ, ಭೋಜ ಶೆಟ್ಟಿಗಾರ್, ದೀಪಕ್ ಶೆಟ್ಟಿಗಾರ್, ಚೇತನ್ ಕುಲಾಲ್, ನಿತೇಶ್ ಆರಂಬೋಡಿ, ದೇವಪ್ಪ ಗೌಡ, ಬೂಬ ಶೆಟ್ಟಿಗಾರ್, ಜಯವರ್ಮ ಜೈನ್, ಪ್ರಶಾಂತ್ ಉಪ್ಪಿರ ಮತ್ತಿತರರು ಉಪಸ್ಥಿತರಿದ್ದರು.