

ಕಿನ್ನಿಗೋಳಿ: ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಬಳ್ಕುಂಜೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಮೂಲ್ಕಿ ತಾಲೂಕು ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಆಯುರ್ವೇದ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಪರಿಸರ ಸಂರಕ್ಷಣೆ ಹಾಗೂ ಸಸ್ಯ ಹಾಗೂ ಪ್ರಾಣಿ ಪಕ್ಷಿಗಳ ಸಂರಕ್ಷಣೆಯಲ್ಲಿ ಆಯುರ್ವೇದದ ಪಾತ್ರದ ಬಗ್ಗೆ ಬಳ್ಕುಂಜೆ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿಷ್ಣುದಾಸ್ ಭಟ್ ಉದ್ಘಾಟಿಸಿದರು. ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಶೋಭಾರಾಣಿ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು.
ಕಿನ್ನಿಗೋಳಿ ಕೋಸ್ಟಲ್ ಹನಿ ಸಂಸ್ಥೆಯ ಮುಖ್ಯಸ್ಥ ಪ್ರಜ್ವಲ್, ಪ್ರಾಣಿ-ಪಕ್ಷಿಗಳ ಸಂರಕ್ಷಣೆ ಬಗ್ಗೆ ಜೇನುನೊಣ, ಹಾವು, ಚಿಟ್ಟೆಗಳ ಮಹತ್ವದ ಬಗ್ಗೆ ವಿವರ ನೀಡಿದರು.
ಸಸ್ಯಗಳ ಪರಿಚಯ ಹಾಗೂ ಅವುಗಳ ಉಪಯೋಗದ ಬಗ್ಗೆ ನಡೆದ ಸ್ಪರ್ಧಾ ವಿಜೇತರಿಗೆ ಬಹುವಾನ ವಿತರಿಸಲಾಯಿತು.
ಪೊಂಪೈ ಕಾಲೇಜಿನ ಉಪನ್ಯಾಸಕ ಪೃಥ್ವಿರಾಜ್, ಕಿನ್ನಿಗೋಳಿ ಐಕಳ ಪೊಂಪೈ ಪದವಿ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.