

ಬದಿಯಡ್ಕ: ಐವತ್ತನೇ ವರ್ಷದಲ್ಲಿ ಮತ್ತೆ ಜೀರ್ಣೋದ್ಧಾರಗೊಂಡು ನೂತನ ಮಂದಿರ ಭಕ್ತರ ಆರಾಧನೆ ಕೇಂದ್ರವಾಗಿ ಬೆಳಗಲಿ. ಮೇಲು-ಕೀಳೆಂಬ ಭಾವನೆಯಿಲ್ಲದೆ ಭಜನಾ ಮಂದಿರದಲ್ಲಿ ಎಲ್ಲರೂ ಒಂದುಗೂಡಿ ದೇವರನ್ನು ಭಜಿಸುವ ಪರಿಪಾಠ ಹಿರಿಯರು ಹಾಕಿಕೊಟ್ಟಿದ್ದಾರೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ನೀರ್ಚಾಲು ಶ್ರೀ ಕುಮಾರ ಸ್ವಾಮಿ ಭಜನಾ ಸಂಘದ ನೂತನ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವನ್ನು ಬುಧವಾರ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಉದ್ಯಮಿ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಉದ್ಘಾಟಿಸಿದರು.
ಧಾರ್ಮಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು ಮಾತನಾಡಿ, ಹಿಂದು ಸಮಾಜದ ಮಾನಸಿಕ ಶ್ರೀಮಂತಿಕೆಯು ಧಾರ್ಮಿಕ ಕ್ಷೇತ್ರಗಳ ಪುನರುದ್ಧಾರಕ್ಕೆ ಕಾರಣವಾಗುತ್ತದೆ. ಕ್ಷೇತ್ರಗಳು ಹಾಗೂ ಆರಾಧನಾಲಯಗಳಲ್ಲಿ ಮುಂದಿನ ಜನಾಂಗಕ್ಕಾಗಿ ಧರ್ಮದ ಶಿಕ್ಷಣವನ್ನು ನೀಡಬೇಕು ಎಂದರು.
ಜ್ಯೋತಿಷ್ಯರತ್ನ ಬೇಳ ಪದ್ಮನಾಭ ಶರ್ಮ ಇರಿಞ್ಞಿಲಕುಡ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾಸರಗೋಡು ಯೋಜನಾಧಿಕಾರಿ ಮುಖೇಶ್ ಮಾತನಾಡಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಶಿವಶಂಕರ ಭಟ್ ಕಿಳಿಂಗಾರು, ಮಂದಿರದ ಶಿಲ್ಪಿ ರಮೇಶ ಕಾರಂತ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಖಂಡಿಗೆ, ಕುಮಾರಸ್ವಾಮಿ ಭಜನಾ ಸಂಘ ಅಧ್ಯಕ್ಷ ನಾರಾಯಣ ಶೆಟ್ಟಿ ಬೇಳ, ಮಂದಿರದ ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯ, ವ್ಯಾಪಾರಿ ಘಟಕ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಗುರುಸ್ವಾಮಿಗಳಾದ ರಮೇಶ್ ಆಚಾರ್ಯ, ಕುಂಞಿಕಣ್ಣ, ಸಂಜೀವ ರೈ, ಜೀರ್ಣೋದ್ಧಾರ ಸಮಿತಿ ರಕ್ಷಾಧಿಕಾರಿ ಪರಮೇಶ್ವರ ಆಚಾರ್ಯ ನೀರ್ಚಾಲು, ಗೌರವ ಸಲಹೆಗಾರ ಮಾನ ಮಾಸ್ತರ್ ಮಾನ್ಯ, ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ನಾರಾಯಣ ನಾಯ್ಕ ಮೈಕುರಿ, ಶಿವಾಜಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಜಿತ್ ಕುಮಾರ್ ಬೇಳ, ಧರ್ಮಶಾಸ್ತಾ ಮಿತ್ರಮಂಡಳಿ ಅಧ್ಯಕ್ಷ ಚೋಮ ನಾಯ್ಕ ಮೈಕುರಿ, ಕುಮಾರಸ್ವಾಮಿ ಮಹಿಳಾ ಭಜನಾ ಸಂಘ ಅಧ್ಯಕ್ಷೆ ಪದ್ಮಾವತಿ ಗಂಗಾಧರ ಪೂವಾಳೆ, ರತ್ನಗಿರಿ ಶ್ರೀ ಭಗವತಿ ಸೇವಾ ಸಮಿತಿ ಜಯರಾಮ ಪೊನ್ನಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮಂಜುನಾಥ ಡಿ. ಮಾನ್ಯ ಪ್ರಾಸ್ತಾವಿಸಿ ನಿರೂಪಿಸಿದರು. ರವೀಂದ್ರ ಮಾಸ್ತರ್ ನೀರ್ಚಾಲು ಸ್ವಾಗತಿಸಿ, ಬಾಲಕೃಷ್ಣ ನಾಯ್ಕ ನೀರ್ಚಾಲು ವಂದಿಸಿದರು.
ಎಲ್ಲರನ್ನೂ ಒಂದುಗೂಡಿಸುವಂತಹ ಅಪಾರವಾದ ಶಕ್ತಿಯುಳ್ಳ ಸುಬ್ರಹ್ಮಣ್ಯ ದೇವರ ನೂತನ ಮಂದಿರ ಹಿಂದು ಸಮಾಜದ ಶಕ್ತಿ ಕೇಂದ್ರವಾಗಲಿ. ಹಿಂದು ನಂಬಿಕೆಗಳು, ಆಚಾರಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳನ್ನು ತಡೆಗಟ್ಟಬೇಕು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರಣ https://www.vijayavani.net/power-outage-in-many-places-tomorrow-2 https://www.vijayavani.net/a-jugalbandi-show-called-hey-govind-2