

ಬೆಂಗಳೂರು: ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ ಜಾಗೃತಿ ಸಪ್ತಾಹ ಆಚರಿಸಲಾಯಿತು. ಪವರ್‌ಗ್ರಿಡ್ ನಿರ್ದೇಶಕ ಸುನೀಲ್‌ಕುಮಾರ್ ಶರ್ಮಾ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ರವಿ ‘ವಿಜಿಲೆಂಟ್ ಇಂಡಿಯಾ, ಸಮೃದ್ಧ ಭಾರತ ಥೀಮ್’, ಭ್ರಷ್ಟಾಚಾರ ವಿರುದ್ಧ ಹೋರಾಡುವ ಒಳನೋಟಗಳ ಬಗ್ಗೆ ಮಾತನಾಡಿದರು.
ವ್ಯವಸ್ಥೆ ಹಾಗೂ ಸಮಾಜದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ವಿವಿಧ ಚಟುವಟಿಕೆ ಆಯೋಜಿಸಲಾಗಿತ್ತು. ಮಾರಾಟಗಾರರ ಸಭೆ ಆಯೋಜಿಸಲಾಗಿತ್ತು. ಉದ್ಯೋಗಿಗಳಿಗೆ ರಸಪ್ರಶ್ನೆ ಸ್ಪರ್ಧೆ ಹಾಗೂ ಚಿತ್ರಕಲೆ ಸೇರಿ ಮತಿತ್ತರರ ಚಟುವಟಿಕೆಗಳು ನಡೆದವು. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಉದ್ಯೋಗಿಗಳು ಸಮಗ್ರ ಪ್ರತಿಜ್ಞೆ ಮಾಡಿದರು. ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಪುದುಚೆರಿ ಸಂಸ್ಥೆಯ ಸಿಬ್ಬಂದಿಗಳಿದ್ದರು.