ಜಾಗೃತಿಗೆ ಪೋಸ್ಟರ್ ಮೇಕಿಂಗ್ ಸ್ಪರ್ಧೆ

xr:d:DAGCY7lTngQ:2,j:580263292623343924,t:24041411
xr:d:DAGCY7lTngQ:2,j:580263292623343924,t:24041411
Published on

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಮತದಾನ ಜಾಗೃತಿಗಾಗಿ ಭಾನುವಾರ ಪೋಸ್ಟರ್ ಮೇಕಿಂಗ್ ಸ್ಪರ್ಧೆ ನಡೆಯಿತು.

ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಅಧ್ಯಕ್ಷ ಆರ್.ಕೆ.ಶ್ರೀಕುಮಾರ್ ಸ್ಪರ್ಧೆಗೆ ಚಾಲನೆ ನೀಡಿ, ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ. ಮತದಾನ ಕೇವಲ ಹಕ್ಕಲ್ಲ ಅದು ಮೂಲಭೂತ ಕರ್ತವ್ಯವೂ ಆಗಿದೆ. ತಪ್ಪದೆ ಮತದಾನ ಮಾಡುವಂತೆ, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳು, ಯುವಕರು, ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲು ಪೋಸ್ಟರ್ ಮೇಕಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಪೋಸ್ಟರ್ ಮೇಕಿಂಗ್ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದ 22ಜನರಲ್ಲಿ 20 ಜನ ಪಾಲ್ಗೊಂಡಿದ್ದರು. 18 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಎಚ್.ಎಂ.ಅಮೂಲ್ಯ (ಪ್ರಥಮ), ತನುಶ್ರೀ (ದ್ವಿತೀಯ), ಬಿ.ವಿ.ಪ್ರಣತಿ(ತೃತೀಯ) , 18 ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಲಿಖಿತಪ್ರಿಯಾ (ಪ್ರಥಮ), ಶ್ರೀದೇವಿ (ದ್ವಿತೀಯ), ರಮೇಶ (ತೃತೀಯ) ಇವರನ್ನು ಜಿಲ್ಲಾ ಮಟ್ಟದ ಪೋಸ್ಟರ್ ಮೇಕಿಂಗ್ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕಿ ಪುಷ್ಪಲತಾ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕಿ ಸಿ.ಶೋಭಾ ತೀರ್ಪುಗಾರರಾಗಿದ್ದರು. ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಇಸಿಒ ಟಿ.ಎಂ.ಬಸವರಾಜ, ತಾಪಂ ಎಡಿಪಿಆರ್ ಅಪರಂಜಿ, ಐಇಸಿ ಸಂಯೋಜಕ ಹನುಮೇಶ, ಜಯಶ್ರೀ, ಮುಖ್ಯಶಿಕ್ಷಕ ಹನುಮನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net