ಆಟಿ ಆಚರಣೆಯಿಂದ ಪೂರ್ವಜರ ಕಷ್ಟ ಅರಿವು

BLM (5)
Published on

ಕಾರ್ಕಳ: ಪೂರ್ವಜರ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುವುದೇ ಆಟಿ ಆಚರಣೆಯಾಗಿದೆ. ಆಟಿ ತಿಂಗಳಲ್ಲಿ ತಿನ್ನುವ ಆಹಾರಗಳು ನಮಗೆ ಪೌಷ್ಟಿಕತೆ ನೀಡುತ್ತದೆ. ಆಚರಣೆಗಳು ಆಟಿ ತಿಂಗಳಿಗಷ್ಟೇ ಸೀಮಿತವಾಗಿರಬಾರದು ಎಂದು ಮುಂಡ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ಪ ಸಪಳಿಗ ಹೇಳಿದರು.

ಮುಂಡ್ಕೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ವತಿಯಿಂದ ಶನಿವಾರ ಆಯೋಜಿಸಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಡಿಒ ಸತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಮಲ್ಲಿಕಾ ಆಚಾರ್ಯ ಉಪಸ್ಥಿತರಿದ್ದರು.

ಸಂಕಲಕರಿಯ ಅಂಗನವಾಡಿಯ ಪುಷ್ಪಾ ಹಾಗೂ ಆರೋಗ್ಯ ಇಲಾಖೆಯ ಮರ್ಲಿನಿ ಆಟಿ ಆಚರಣೆ ಕುರಿತು ಮಾತನಾಡಿದರು. ಶಶಿಕಲಾ ವಂದಿಸಿದರು. ವನಿತಾ ಶುಭಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net