ಮಾನಕ್​ ಕಾರ್ನಿವಲ್​ನಲ್ಲಿ ಗುಣಮಟ್ಟ ಮಾನದಂಡದ ಅರಿವು:ವಿಜೇತರಿಗೆ ಬಹುಮಾನ ವಿತರಣೆ

BIS1
Published on

ಬೆಂಗಳೂರು:ಭಾರತೀಯ ಮಾನಕ ಬ್ಯುರೋ (ಬಿಐಎಸ್​) ಬೆಂಗಳೂರು ಶಾಖೆ, ದಾಸರಹಳ್ಳಿಯಲ್ಲಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ "ಮಾನಕ್​ ಕಾರ್ನಿವಲ್​'ನಲ್ಲಿ ಗುಣಮಟ್ಟ ಮಾನದಂಡಗಳ ಬಗ್ಗೆ ಅರಿವು ಮೂಡಿಸಲಾಯಿತು.

ಶಾಸಕ ಮುನಿರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 6 ಪ್ರತಿಷ್ಠಿತ ಶಾಲೆಗಳು ಮತ್ತು ಪಿಯು ಕಾಲೇಜುಗಳಿಂದ ಅಂದಾಜು 350 ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮವು ಗುಣಮಟ್ಟ ಮಾನದಂಡಗಳ ಬಗ್ಗೆ ಅರಿವು ಮೂಡಿಸುವುದು, ಯುವ ಜನಾಂಗದಲ್ಲಿ ಸೃಜನಶೀಲತೆ ಮತ್ತು ನಾವೀನ್ಯತೆ ಬೆಳೆಸುವ ಗುರಿ ಹೊಂದಿತ್ತು. ಗಾಳಿಪಟ ಅಲಂಕಾರ, ಬಿಐಎಸ್​ ಗುಣಮಟ್ಟ, ಮಾನದಂಡಗಳ ಕುರಿತು 2 ನಿಮಿಷಗಳ ಭಾಷಣ ಮತ್ತು ರಸಪ್ರಶ್ನೆ ಸೇರಿ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ದಾಸರಹಳ್ಳಿಯ ಸರ್ಕಾರಿ ಪಿಯು ಕಾಲೇಜುಗೆ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿ ಲಭಿಸಿತ್ತು. ಎನ್​ಎಂಎಚ್​ ಗ್ಲೋಬಲ್​ ಶಾಲೆ ಮತ್ತು ಪಿಎಂಶ್ರೀ ಕೇಂದ್ರಿಯ ವಿದ್ಯಾಲಯ ಸಿಆರ್​ಪಿಎಫ್​​​ ಯಲಹಂಕ ಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದವು. ಐಎಸ್​ಐ ಗುರುತಿನ ಉತ್ಪನ್ನಗಳು, ವಿದ್ಯಾರ್ಥಿಗಳು ತಯಾರಿಸಿದ ಪೋಸ್ಟರ್​ಗಳು, ತಂತ್ರಜ್ಞಾನ ಮತ್ತು ಸೃಜನಶೀಲತೆಯಲ್ಲಿ ಗುಣಮಟ್ಟದ ಮಾನದಂಡಗಳ ಮಹತ್ವವನ್ನು ಪ್ರದರ್ಶಿಸಲಾಯಿತು.

ಐಐಟಿಯ ಮಾಜಿ ಪ್ರಾಧ್ಯಾಪಕ ಬ್ರಿಜ್​ ಕೆ.ದಿಂಡಾವ್​, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ವಾಣಿಶ್ರೀ, ಬಿಐಎಸ್​ ಬೆಂಗಳೂರು ಶಾಖೆ ಮುಖ್ಯಸ್ಥ ಕೆ.ವಿಜಯವೀರನ್​, ನಿರ್ದೇಶಕ ನರೇಂದರ್​ ರೆಡ್ಡಿ ಬೀಸು ಮತ್ತು ಯೋಗ ತರಬೇತುದಾರ ಎಸ್​.ಮಂಜುನಾಥ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net