ಮಾಂಸಹಾರ ನಿಷೇಧ ಆದೇಶ ಅವೈಜ್ಞಾನಿಕ:ಬೆಂಗಳೂರು ಹೋಟೆಲ್​ಗಳ ಸಂಘ ಹೇಳಿಕೆ

hotel
Published on

ಬೆಂಗಳೂರು: ಏರ್​ ಶೋ ಹಿನ್ನೆಲೆಯಲ್ಲಿ ಜ.23ರಿಂದ ಫೆ.17ರವರೆಗೆ ಮಾಂಸಹಾರ ನಿಷೇಧ ಕುರಿತು ಹೊರಡಿಸಿರುವ ಆದೇಶ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದನ್ನು ಮರುಪರಿಶೀಲಿಸುವಂತೆ ಬೆಂಗಳೂರು ಹೋಟೆಲ್​ಗಳ ಸಂಘ ಮನವಿ ಮಾಡಿದೆ.

ಫೆ.10ರಿಂದ ಫೆ.14ರವರೆಗೆ ಏರ್​ಶೋ ಪ್ರದರ್ಶನ ನಡೆಯಲಿದೆ. ಆದರೆ, 26 ದಿನಗಳ ಕಾಲ ಮಾಂಸಹಾರ ಸ್ಥಗಿತ ನಿರ್ಧಾರದಿಂದ ಆತಿಥ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಲಿದೆ. ಯಲಹಂಕ ವಾಯುನೆಲೆ ಸುತ್ತಮುತ್ತ ಪ್ರದೇಶದಲ್ಲಿ ಅಂದಾಜು 5 ಸಾವಿರಕ್ಕೂ ಅಧಿಕ ಹೋಟೆಲ್​, ಸ್ಟಾರ್​ ಹೋಟೆಲ್​, ಪಬ್​, ಬಾರ್​ ಮತ್ತು ರೆಸ್ಟೋರೆಂಟ್​ಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಹೋಟೆಲ್​ಗಳ ವ್ಯಾಪಾರ ಸ್ಥಗಿತವಾದರೆ ಹೆಚ್ಚಿನ ತೊಂದರೆಯಾಗಲಿದೆ ಎಂದು ಸಂಘದ ಅಧ್ಯಕ್ಷ ಎಸ್​. ಸುಬ್ರಮಣ್ಯ ಹೊಳ್ಳ ಹೇಳಿದ್ದಾರೆ.

ಪ್ರತಿ ನಿತ್ಯ ಹೋಟೆಲ್​ಗಳು ಗಾರ್ಬೆಜ್​ ಬ್ಯಾಗ್​ನಲ್ಲಿ ತ್ಯಾಜ್ಯ ಹಾಕಿ ಕಸತ್ಯಾಜ್ಯ ಸಂಗ್ರಹಣಾ ವಾಹನದ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದಾಗಿ ಹೋಟೆಲ್​ನ ಅಜುಬಾಜಿನಲ್ಲಿ ಹಕ್ಕಿಗಳಿಗೆ ಆಹಾರ ಸಂಗ್ರಹವಾಗಲ್ಲ. ವಾಯುನೆಲೆ ಒಳಗಡೆ ಅತಿಥಿಗಳಿಗೂ ಮಾಂಸಾಹಾರ ಸರಬರಾಜುವಾಗುತ್ತದೆ. ವ್ಯಾಪಾರ ಸಭೆ, ಮದುವೆ ಸೇರಿ ಇತರೆ ನೂರಾರು ಕಾರ್ಯಕ್ರಮಗಳಿಗೆ ದಿನಾಂಕ ನಿಗದಿಯಾಗಿದೆ. ಹೀಗಿರುವಾಗ,ಅನಗತ್ಯ ಮಾರ್ಗಸೂಚಿಯಿಂದ ಆತಿಥ್ಯ ಕ್ಷೇತ್ರಕ್ಕೆ ನೂರಾರು ಕೋಟಿ ರೂ.ನಷ್ಟವಾಗಲಿದೆ. ಏರ್​ಶೋ ಪಕ್ಕದ ಮಾಂಸದ ಅಂಗಡಿಗಳನ್ನು ಅಗತ್ಯವಿದ್ದರೆ ವಾರದ ಮಟ್ಟಿಗೆ ಮುಚ್ಚಿಸುವುದು ಸೂಕ್ತ. ಹಾಗಾಗಿ, ಹೋಟೆಲ್​ ಉದ್ಯಮಕ್ಕೆ ಆಡಚಣೆಯಾಗದಂತೆ ನೋಡಿಕೊಳ್ಳಬೇಕೆಂದು ಸಂದ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net