

ಖಾನಾಪುರ: ಶಿಣವಿಲ್ಲದೆ ಮನುಷ್ಯ ಸಮೃದ್ಧನಲ್ಲ. ಹೀಗಾಗಿ, ಪ್ರತಿಯೊಬ್ಬರೂ ಶಿಣದ ಬಗ್ಗೆ ಜಾಗೃತರಾಗಬೇಕು ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಸ್. ವಿದ್ಯಾಶಂಕರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟೋಪಿನಕಟ್ಟಿ ಶ್ರೀ ಮಹಾಲ$್ಮ ಗ್ರೂಪ್ನ ಶಾಂತಿನಿಕೇತನ ಶಿಣ ಸಂಸ್ಥೆಯ ನೂತನ ಬಿಬಿಎ ಹಾಗೂ ಬಿಸಿಎ ಪದವಿ ಕಾಲೇಜು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಶಿಣ ವ್ಯವಸ್ಥೆಯಲ್ಲಿ ಬಿಬಿಎ, ಬಿಸಿಎ ನಂತಹ ವಿಭಿನ್ನ ಕೋರ್ಸ್ಗಳ ಅಗತ್ಯವಿದೆ. ಬೆಂಗಳೂರು, ಮುಂಬೈಗಳಲ್ಲಿ ಉದ್ಯೋಗಗಳಿಗೆ ಇಂತಹ ಕೋರ್ಸ್ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯ, ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ವಿದ್ಯೆ ನೀಡುವ ಮೂಲಕ ಮಹಾಲ$್ಮ ಶಿಣ ಸೊಸೈಟಿ ಪ್ರಗತಿಯತ್ತ ಸಾಗುತ್ತಿದೆ. ಹೊಸ ಕೋರ್ಸ್ ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.ಶಾಂತಿನಿಕೇತನ ಪದವಿ ಕಾಲೇಜಿನ ಅಧ್ಯ ಬಂಡು ನೀಲಜ್ಕರ್, ಶಾಂತಿನಿಕೇತನ ಪಬ್ಲಿಕ್ ಶಾಲೆ ಉಪಾಧ್ಯ ಭರತ್ ಟೋಪಿನಕಟ್ಟಿ, ರಾಜೇಂದ್ರ ಪಾಟೀಲ, ಮಹಾಲ$್ಮ ಗ್ರೂಪ್ನ ವಿಠ್ಠ್ಠಲ ಕರ್ಬಾಲ್ಕರ್, ಚಗ್ಗಪ್ಪ ನೀಲಜ್ಕರ್, ಮಹಾದೇವ ಬಡೇವ್ಡೇಕರ್, ಯಲ್ಲಪ್ಪ ತಿರ್ವೀರ್, ಅನಿಲ ಕದಮ್, ಬಾಳಾಸಾಹೇಬ ದೌಲತ್ಕರ್, ವಿಜಯ ಪಾಟೀಲ, ಮಹಾಲ$್ಮ ಗ್ರೂಪ್ ನಿರ್ದೇಶಕರು ಮತ್ತು ಸದಸ್ಯರು ಇತರರಿದ್ದರು.