ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
Published on

ಕೆ.ಆರ್.ಸಾಗರ: ವಿಶ್ವ ಪರಿಸರ ದಿನ ಅಂಗವಾಗಿ ಕೆ.ಆರ್.ಸಾಗರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಬುಧವಾರ ಪರಿಸರ ಕುರಿತು ಅರಿವು ಮೂಡಿಸುವ ಬೋರ್ಡ್‌ಗಳನ್ನು ಹಿಡಿದು ಕೆ.ಆರ್.ಸಾಗರ ಗ್ರಾಮದ ಮುಖ್ಯರಸ್ತೆಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.

ಶಿಕ್ಷಕ ಲಿಂಗರಾಜಪ್ಪ ಮಾತನಾಡಿ, ಪರಿಸರ ಮಾಲಿನ್ಯವಾಗದ ರೀತಿ ಎಲ್ಲರೂ ಎಚ್ಚರ ವಹಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡಬೇಕು, ಅನಗತ್ಯ ನೀರು ಪೋಲಾಗದಂತೆ ಎಚ್ಚರ ವಹಿಸುವುದರ ಜತೆಗೆ, ಮರಗಿಡಗಳನ್ನು ಬೆಳೆಸುವಂತೆ ಕರೆ ನೀಡಿದರು.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಜತೆಗೂಡಿ ಸಸಿ ನೆಟ್ಟರು. ಉಪಪ್ರಾಂಶುಪಾಲ ಉಮೇಶ್ವರ್ ಹಾಗೂ ಶಿಕ್ಷಕರು ಇದ್ದರು.

ಪೋಟ 05-06ಞಡಿ1: ವಿಶ್ವಪರಿಸರ ದಿನ ಅಂಗವಾಗಿ ಕೆ.ಆರ್.ಸಾಗರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಬುಧವಾರ ಪರಿಸರ ಕುರಿತು ಅರಿವು ಮೂಡಿಸುವ ಬೋರ್ಡ್‌ಗಳನ್ನು ಹಿಡಿದು ಕೆ.ಆರ್.ಸಾಗರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net