ಸ್ಪರ್ಧಾತ್ಮಕ ಜಗತ್ತಲ್ಲಿ ಬದುಕಲು ಅರಿವು

samalochana sabhe
samalochana sabhe
Published on

ಕುಂದಾಪುರ: ಭಾರತ ಈಗ ಶೇ. 47ರಷ್ಟು ಯುವಕರಿಂದ ಕೂಡಿದ ದೇಶ. ಮಕ್ಕಳಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಹೊಸ ಹೊಸ ನೀತಿಗಳ ಅರಿವು ಅತ್ಯಗತ್ಯ. ಶಾಲಾ ಪಠ್ಯ ಅಧ್ಯಯನ ಮತ್ತು ಅದರಲ್ಲಿ ಪೂರ್ಣಾಂಕ ಗಳಿಸುವುದಷ್ಟೇ ವಿದ್ಯಾರ್ಥಿಯ ಗುರಿಯಾಗಿರಬಾರದು ಎಂದು ಬೆಂಗಳೂರಿನ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಪರಿಷತ್, ಅಕಾಡೆಮಿಕ್ಸ್ ಮತ್ತು ಟ್ರೈನಿಂಗ್ ನಿರ್ದೇಶಕ ಡಾ.ಸಿ.ಕೆ.ಮಂಜುನಾಥ ಹೇಳಿದರು.

ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶನಿವಾರ ನಡೆದ ಪಾಲಕರ, ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಅವರು ಶಾಲೆಯ ವಾರ್ಷಿಕ ಪತ್ರಿಕೆ ಜ್ಯೋತಿಷ್ಮತಿಯನ್ನು ಬಿಡುಗಡೆ ಮಾಡಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ ಹಾಗೂ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿ ಪ್ರೊ.ಎಸ್.ನಾರಾಯಣ ರಾವ್, ಪ್ರಾಂಶುಪಾಲ ಶರಣಕುವಾರ ಮಾತನಾಡಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿ ಪ್ರೊ.ಎನ್.ಪಿ.ನಾರಾಯಣ ಶೆಟ್ಟಿ, ಶಾಲೆ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪ ಪ್ರಾಂಶುಪಾಲ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸುಜಾತಾ ಸದಾರಾಮ ಉಪಸ್ಥಿತರಿದ್ದರು. ವಿನುತಾ ಸ್ವಾಗತಿಸಿ, ಅಕ್ಷತಾ ಕೆ.ವಂದಿಸಿದರು. ಶಿಕ್ಷಕಿ ಸಂಗೀತಾ ಕೆ.ಆರ್. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net