ವಿಶ್ವ ಶ್ರವಣ ದಿನ ಅಂಗವಾಗಿ ಪೊಲೀಸ ಇಲಾಖೆಯ ಸಿಬ್ಬಂದಿಗಳಿಗೆ ಜÁಗೃತಿ ಮನುಷ್ಯನಿಗೆ ಪಂಚೇAದ್ರಿಯ ಬಹಳ ಮುಖ್ಯ: ಎಸ್ಪಿ

SP RAICHUR
SP RAICHUR
Published on

ರಾಯಚೂರು ಆಧುನಿಕ ಸಮಾಜದಲ್ಲಿ ಮನುಷ್ಯನಿಗೆ ಪಂಚೇAದ್ರಿಯ ಬಹಳ ಮುಖ್ಯವಾಗಿದ್ದು, ಅವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಪೊಲೀಸ ವರಿಷ್ಠಾಽಕಾರಿ ಎಂ.ಪುಟ್ಟಮಾದಯ್ಯ ಅವರು ಹೇಳಿದರು.

ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಿಮ್ಸ್ ಆಸ್ಪತ್ರೆ ವತಿಯಿಂದ ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮದಡಿ ವಿಶ್ವ ಶ್ರವಣ ದಿನದ ಅಂಗವಾಗಿ ಪೊಲೀಸ ಇಲಾಖೆಯ ಸಿಬ್ಬಂದಿಗಳಿಗೆ ಒಂದು ದಿನ ಜÁಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಂಚೇAದ್ರಿಯಗಳು ಮನುಷ್ಯನಿಗೆ ಬಹಳ ಮುಖ್ಯವಾಗಿದೆ. ಅವುಗಳನ್ನು ಸರಿಯಾಗಿ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ ಸೇವನೆ, ಉತ್ತಮ ಜೀವನ ಶೈಲಿಯ ಅಭ್ಯಾಸ ರೂಢಿಸಿಕೊಳ್ಳಬೇಕು. ನಿಮ್ಮ ಶ್ರವಣಶಕ್ತಿಯ ಕುರಿತು ಶಂಕೆ ಉಂಟಾದಲ್ಲಿ ತಪ್ಪದೇ ಹತ್ತಿರದ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ಜೋರಾದ ಪರಿಮಾಣದಲ್ಲಿ ಸಂಗೀತವನ್ನು ಕೇಳಬಾರದು, ಜÁಸ್ತಿ ಸಮಯ ಇಯರೋನ್, ಹೆಡ್-ೆÇÃನ್‌ಗಳನ್ನು ಬಳಕೆ ಮಾಡಬಾರದು. ಧ್ವನಿವರ್ಧಕಗಳ ಬಳಿಯಾಗಲಿ, ಅತಿಯಾದ ಶಬ್ದ ಯಂತ್ರಗಳ ಬಳಿ, ಕಾರ್ಖಾನೆಗಳಿಂದ ದೂರವಿರಿ. ಕಿವಿ ನೋವು, ಸೋರುವುದು, ಕಿವಿ ಮುಚ್ಚಿದಂತಾದಾಗ, ತಲೆಸುತ್ತು ಬಂದಾಗ ನಿರ್ಲಕ್ಷಿಸಬೇಡಿ ಕೂಡಲೇ ಹತ್ತಿರದ ತಜ್ಞರನ್ನು ಬೇಟಿ ಮಾಡಿ ಚಿಕಿತ್ಸೆ ಪಡೆಯಬೇಕು ಎಂದರು.

ಡಿಎಚ್‌ಓ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ಶ್ರವಣದೋಷದ ಕುರಿತು ಸಾರ್ವಜನಿಕರಲ್ಲಿ ಜÁಗೃತಿ ಅವಶ್ಯಕವಾಗಿದೆ. ಶಬ್ದ ಮಾಲಿನ್ಯದಿಂದ ಹೆಚ್ಚಾಗಿ ಮಕ್ಕಳಲ್ಲಿ ಈ ದೋಷ ಕಂಡುಬರುತ್ತದೆ. ಜಿಲೆಯಲ್ಲಿ ಈಗಾಗಲೇ ೨೩ ಮಕ್ಕಳಿಗೆ ಆಪರೇಷÀನ್ ಮಾಡಲಾಗಿದ್ದು , ೩೨ ಮಕ್ಕಳನ್ನು ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ. ಚಿಕಿತ್ಸೆ ಕುರಿತು ತಪ್ಪು ತಿಳುವಳಿಕೆಯಿಂದ ಸಾರ್ವಜನಿಕರು ಹೊರಬರಬೇಕು. ಈ ಕುರಿತು ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯ ಕೇಂದ್ರಗಳ ಮೂಲಕ ಜÁಗೃತಿ ಮೂಡಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸೀನಿಯರ್ ಆಡಿಯೋಲಾಜಿಸ್ಟ್ ಅಽಕಾರಿ ಡಾ.ದೀಪಿಕಾ, ಡಿವೈಎಸ್ಪಿ ಪ್ರಮಾನಂದ, ಜಿಲ್ಲಾ ಆರ್.ಸಿ.ಹೆಚ್ ಅಽಕಾರಿ ಡಾ.ನಂದಿತಾ, ಜಿಲ್ಲಾ ಕುಟುಂಬ ಕಲ್ಯಾಣ ಅಽಕಾರಿ ಡಾ.ಶಿವುಕುಮಾರ್, ರಾಯಚೂರು ತಾಲೂಕು ಆರೋಗ್ಯಾಽಕಾರಿ ಡಾ.ಪ್ರಜ್ವಲ್ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಪೊಲೀಸ ಇಲಾಖೆಯ ವಿವಿಧ ಅಽಕಾರಿ, ಸಿಬ್ಬಂದಿಗಳು ಇದ್ದರು.

----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net