

ಹೆಬ್ರಿ: ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ವಿಭಾಗ, ಹೆಬ್ರಿ ಪೊಲೀಸ್ ಠಾಣೆ ವತಿಯಿಂದ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ನಡೆಯಿತು.
ಹೆಬ್ರಿ ಪಿಎಸ್‌ಐ ರವಿ ಬಿ.ಕೆ. ಮಾತನಾಡಿ, ಮಾದಕ ದ್ರವ್ಯ ವ್ಯಸನದಿಂದ ವಿದ್ಯಾರ್ಥಿಗಳ ಅಮೂಲ್ಯ ಬದುಕು ನಾಶವಾಗುತ್ತದೆ. ಓದಿನತ್ತ ಮಾತ್ರ ಗಮನ ಹರಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕಾಗಿದೆ ಎಂದರು.
ಪಿಎಸ್‌ಐ ಮಹಾಂತೇಶ್ ಜಾಬಗೌಡ, ಪ್ರಾಂಶುಪಾಲ ಸುಧಾಕರ್ ಕೆ.ಜಿ., ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ವಿಶ್ವೇಶ್ವರ ಗಾಂವ್ಕರ್, ವಿದ್ಯಾರ್ಥಿಗಳಾದ ಶ್ರೀಶಾ ಆಚಾರ್ಯ, ಪ್ರಿಯಾಂಕಾ, ರಕ್ಷಿತಾ ಹಾಜರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಆನಂದ್ ಕುಮಾರ್ ಜಿ. ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ದೇವರಾಜು ಕೆ. ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಆಚಾರಿ ವಂದಿಸಿದರು.